250 ಭಯೋತ್ಪಾದಕರು ಹತರಾಗಿದ್ದಾರೆ ಎಂಬ ಶಾ ಹೇಳಿಕೆ ಬಗ್ಗೆ ‘ಗುರು’ ಮೋದಿ ಮೌನ ಯಾಕೆ ?: ಮಾಯಾವತಿ

Update: 2019-03-05 16:30 GMT

ಲಕ್ನೋ, ಮಾ. 5: ಪಾಕಿಸ್ತಾನದ ಬಾಲಕೋಟ್‌ನ ಮೇಲೆ ಭಾರತೀಯ ವಾಯು ಪಡೆ ನಡೆಸಿದ ದಾಳಿಯಲ್ಲಿ 250 ಉಗ್ರರು ಹತರಾಗಿದ್ದಾರೆ ಎಂದು ಪ್ರತಿಪಾದಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಟೀಕಿಸಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ, ಇದರ ಬಗ್ಗೆ ಪ್ರಧಾನಿ ಮೋದಿ ಅವರು ಮೌನವಾಗಿದ್ದಾರೆ ಯಾಕೆ ? ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದ ಬಾಲಕೋಟ್‌ನಲ್ಲಿ ಭಾರತೀಯ ವಾಯು ಪಡೆ ನಡೆಸಿದ ದಾಳಿಯಲ್ಲಿ 250 ಮಂದಿ ಹತರಾಗಿದ್ದಾರೆ. ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಆದರೆ, ಎಲ್ಲ ವಿಷಯದಲ್ಲೂ ಲಾಭ ಪಡೆದುಕೊಳ್ಳುವ ಮೋದಿ ಈ ವಿಷಯದಲ್ಲಿ ಮೌನವಹಿಸಿದ್ದಾರೆ ಯಾಕೆ?, ಭಯೋತ್ಪಾದಕರನ್ನು ಹತ್ಯೆಗೈದಿರುವುದು ಉತ್ತಮ ವಿಚಾರ. ಆದರೆ, ಪ್ರಧಾನಿ ಮೋದಿ ಅವರ ಮೌನದ ಹಿಂದಿರುವ ನಿಗೂಢತೆ ಏನು ಎಂದು ಮಾಯವತಿ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಅಹ್ಮದಾಬಾದ್‌ನಲ್ಲಿ ರವಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಶಾ, ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಕೋಟ್‌ನ ಭಯೋತ್ಪಾದಕರ ಶಿಬಿರದ ಮೇಲೆ ದಾಳಿ ನಡೆಸಿ 250 ಮಂದಿ ಉಗ್ರರನ್ನು ಹತ್ಯೆಗೈದಿದೆ ಎಂದು ಪ್ರತಿಪಾದಿಸಿದ್ದರು. ಬಿಜೆಪಿ ಸರಕಾರ ಆರ್ಥಿಕ ನೀತಿಯನ್ನು ಕೂಡ ಟೀಕಿಸಿದ ಮಾಯಾವತಿ ಅವರು, ಆರ್ಥಿಕ ಬೆಳವಣಿಗೆಯ ಲಾಭ ದೇಶದ 130 ಕೋಟಿ ಜನಸಂಖ್ಯೆಯ ತೀರಾ ಬಡವರು, ಕಾರ್ಮಿಕರು ಹಾಗೂ ಕಾರ್ಮಿಕರಿಗೆ ತಲುಪುತ್ತಿಲ್ಲ. ಇದು ಕಳವಳಕಾರಿ ವಿಚಾರ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News