ಮುಕೇಶ್ ಅಂಬಾನಿ ಜಗತ್ತಿನ 13ನೇ ಅತ್ಯಂತ ಶ್ರೀಮಂತ ವ್ಯಕ್ತಿ: ಫೋರ್ಬ್ಸ್

Update: 2019-03-05 17:43 GMT

ಹೊಸದಿಲ್ಲಿ,ಮಾ.5: ಫೋರ್ಬ್ಸ್ ಮಂಗಳವಾರ ಬಿಡುಗಡೆ ಮಾಡಿದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಜಗತ್ತಿನ 13ನೇ ಅತೀಶ್ರೀಮಂತ ವ್ಯಕ್ತಿಯಾಗಿ ಸ್ಥಾನಪಡೆದುಕೊಂಡಿದ್ದಾರೆ.

ಕಳೆದ ವರ್ಷ ಅಂಬಾನಿ ಈ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದರು.

ಇ-ಕಾಮರ್ಸ್ ದೈತ್ಯ ಅಮೆಝಾನ್.ಕಾಮ್ ಸ್ಥಾಪಕ ಜೆಫ್ ಬೆಝೊಸ್ ಫೋರ್ಬ್ಸ್ ಪಟ್ಟಿಯಲ್ಲಿ ಈ ವರ್ಷವೂ ಮೊದಲಿಗರಾಗಿದ್ದಾರೆ. ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಅವರ ನಂತರದ ಸ್ಥಾನದಲ್ಲಿದ್ದಾರೆ. ಭಾರತದ ಹಲವು ಪ್ರತಿಷ್ಠಿತ ಕಂಪೆನಿಗಳ ಜೊತೆಗೆ 61ರ ಹರೆಯದ ಅಂಬಾನಿ, ತೈಲ ಮತ್ತು ಅನಿಲ ಕ್ಷೇತ್ರದ ದೈತ್ಯ 600 ಕೋಟಿ ಡಾಲರ್ ವೌಲ್ಯದ ರಿಲಾಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥರಾಗಿದ್ದಾರೆ.

2016ರಲ್ಲಿ ಜಿಯೊ 4ಜಿ ಫೋನ್ ಸೇವೆಯನ್ನು ಪರಿಚಯಿಸುವ ಮೂಲಕ ರಿಲಾಯನ್ಸ್ ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು. 2018ರಲ್ಲಿ 40.1 ಬಿಲಿಯನ್ ಡಾಲರ್ ಇದ್ದ ಮುಕೇಶ್ ಅಂಬಾನಿಯ ಸಂಪತ್ತು 2019ರಲ್ಲಿ 50 ಬಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ ಎಂದು ಫೋರ್ಬ್ಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News