ಹರ್ಯಾಣದಲ್ಲಿ 5,910 ಶತಾಯುಷಿ ಮತದಾರರು

Update: 2019-03-07 08:22 GMT

ಚಂಡೀಗಢ, ಮಾ.7: ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರ ಪಟ್ಟಿ ಸಿದ್ದವಾಗುತ್ತಿದ್ದು, ಹರ್ಯಾಣದಲ್ಲಿ 5, 910 ಮಂದಿ ನೂರು ವರ್ಷ  ದಾಟಿದ ಮತದಾರರಿದ್ದಾರೆ .

ಕರ್ನಲ್ ನಲ್ಲಿ 100 ವರ್ಷ ದಾಟಿದ ಮತದಾರರ ಸಂಖ್ಯೆ ಜಾಸ್ತಿ ಇದೆ. ಅಲ್ಲಿ 553 ಶತಾಯುಷಿಗಳಿದ್ದಾರೆ. ಪಂಚಕುಳದಲ್ಲಿ 111 ಮಂದಿ ನೂರರ ಹರೆಯದ ಮತದಾರರು  ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಹರ್ಯಾಣದಲ್ಲಿ 89,711 ಮಂದಿ 90ರಿಂದ 99ರ ಹರೆಯದ ಮತದಾರರು ನೆಲೆಸಿದ್ದಾರೆ. ಈ ಪೈಕಿ ಗರಿಷ್ಠ 7,946 ಮತದಾರರು ಭಿವಾನಿಯಲ್ಲಿ ಮತ್ತು 1,436 ಪಂಚಕುಳದಲ್ಲಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News