ಲೋಕಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

Update: 2019-03-14 17:32 GMT

ಹೊಸದಿಲ್ಲಿ, ಮಾ. 14: ಮುಂಬೈಯ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪ್ರಿಯಾ ದತ್ ಹಾಗೂ ಮೊರದಾಬಾದ್‌ನಿಂದ ಪಕ್ಷದ ಉತ್ತರಪ್ರದೇಶ ಘಟಕದ ವರಿಷ್ಠ ರಾಜ್ ಬಬ್ಬರ್ ಅವರನ್ನು ಒಳಗೊಂಡಂತೆ 20 ಮಂದಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ. ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಕಳೆದ ಜನವರಿಯಲ್ಲಿ ಪ್ರಿಯಾ ದತ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು. ಆದರೆ, ಬುಧವಾರಕ್ಕಿಂತ ಮುನ್ನ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ದತ್ತ್ ಅವರು 2005ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಮುಂಬೈಯ ಉತ್ತರ ಕೇಂದ್ರ ಸಂಸದೀಯ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದರು. ಅವರು ಮೂರು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಕೊನೆಯದಾಗಿ ಸ್ಪರ್ಧಿಸಿದ್ದು 2014ರಲ್ಲಿ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ಪೂನಂ ಮಹಾಜನ್ ಅವರ ಎದುರು ಸೋತಿದ್ದರು. 21 ಮಂದಿ ಅಭ್ಯರ್ಥಿಗಳಲ್ಲಿ ಐವರು ಮಹಾರಾಷ್ಟ್ರದವರು ಹಾಗೂ 16 ಮಂದಿ ಉತ್ತರಪ್ರದೇಶದವರು. ಲೋಕಸಭಾ ಸ್ಥಾನ ಮಹಾರಾಷ್ಟ್ರದಲ್ಲಿ 48 ಇದ್ದರೆ, ಉತ್ತರಪ್ರದೇಶದಲ್ಲಿ 80 ಇದೆ. ಎಪ್ರಿಲ್ 11ರಿಂದ ಆರಂಭವಾಗಲಿರುವ 7 ಹಂತದ ಲೋಕಸಭಾ ಚುನಾವಣೆಗ ಕಾಂಗ್ರೆಸ್ ಇದುವರೆಗೆ 36 ಮಂದಿ ಅಭ್ಯರ್ಥಿಗಳನ್ನು ಘೋಷಿಸಿದೆ. ಕೊನೆಯ ಹಂತದ ಮತದಾನ ಮೇ 19ರಂದು ನಡೆಯಲಿದೆ. ಮತ ಎಣಿಕೆ ಮೇ 23ರಂದು ನಡೆಯಲಿದೆ. ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮಹಾರಾಷ್ಟ್ರದ ಸೋಲಾಪುರದ ಮೀಸಲು ಕ್ಷೇತ್ರದಿಂದ, ಉತ್ತರಪ್ರದೇಶದ ಕಾನ್ಪುರದಿಂದ ಕೇಂದ್ರದ ಮಾಜಿ ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಬಹ್ರಿಯಾರ್ಕ್‌ನಿಂದ ಸಾವಿತ್ರಿ ಬಾ ಪುಲೆ ಸ್ಪರ್ಧಿಸಲಿದ್ದಾರೆ. ನಾಗಪುರ ಕ್ಷೇತ್ರದಿಂದ ಬಿಜೆಪಿಯ ಮಾಜಿ ನಾಯಕ ನಾನಾ ಪಾಟೋಲೆ, ಮುಂಬೈ ದಕ್ಷಿಣದಿಂದ ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರ ಸ್ಪರ್ಧಿಸಲಿದ್ದಾರೆ. ಡಾ. ನಾಮ್‌ದೇವ್ ದಲ್ಲುಜಿ ಉಸೆಂದಿ ಗಡ್ಚಿರೋಲಿ-ಚಿಮೂರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News