ರಫೇಲ್ ಬೆಲೆ ಬಹಿರಂಗಪಡಿಸುವುದು ಒಪ್ಪಂದದ ಉಲ್ಲಂಘನೆ : ಕೇಂದ್ರ ಸರ್ಕಾರ

Update: 2019-03-15 09:42 GMT

ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನದ ಬೆಲೆಯನ್ನು ಗೌಪ್ಯವಾಗಿಟ್ಟಿದ್ದು, ಇದನ್ನು ಬಹಿರಂಗಪಡಿಸುವುದು ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ಪೀಠದ ಮುಂದೆ ವಾದ ಮಂಡಿಸಿದ ಅಟಾರ್ಜಿ ಜನರಲ್ ಕೆ.ಕೆ.  ವೇಣುಗೋಪಾಲ್ ಅವರು, "ಬೇರೆ ದೇಶಗಳು ಕೂಡಾ ಈ ಕಂಪನಿಯಿಂದ ಯುದ್ಧ ವಿಮಾನಗಳನ್ನು ಖರೀದಿಸಿದ್ದು, ಭಾರತಕ್ಕೆ ಹೇಗೆ ಕಡಿಮೆ ಬೆಲೆಗೆ ಇಂಥದ್ದೇ ವಿಮಾನ ಪೂರೈಸಲಾಗಿದೆ ಎಂದು ಫ್ರಾನ್ಸ್ ದೇಶವನ್ನು ಪ್ರಶ್ನಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಗೌಪ್ಯತೆ ಕಾಪಾಡಲಾಗಿದೆ" ಎಂದು ಸ್ಪಷ್ಟಪಡಿಸಿದರು.

ಐದನೇ ಪೀಳಿಗೆಯ ರಫೇಲ್ ಯುದ್ಧ ವಿಮಾನಗಳನ್ನು ಈಜಿಪ್ಟ್, ಮತ್ತಿತರ ದೇಶಗಳು ಖರೀದಿಸಿದ್ದಕ್ಕಿಂತ ಕಡಿಮೆ ದರದಲ್ಲಿ ಭಾರತ ಖರೀದಿಸಿದೆ ಎಂದು ಮೊಟ್ಟಮೊದಲ ಬಾರಿಗೆ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ವಿಮಾನಗಳನ್ನು ಸರ್ಕಾರ- ಸರ್ಕಾರ ನಡುವಿನ ಒಪ್ಪಂದದಂತೆ ಖರೀದಿಸಲಾಗುತ್ತಿದ್ದು, ಬೆಲೆಯನ್ನು ಗೌಪ್ಯವಾಗಿಡಲಾಗಿದೆ. ಬೆಲೆಯನ್ನು ಬಹಿರಂಗಪಡಿಸುವುದು ಅಂತರ ಸರ್ಕಾರಿ ಒಪ್ಪಂದದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಸಿಎಜಿ ವರದಿಯಲ್ಲೂ ಇದನ್ನು ಉಲ್ಲೇಖಿಸಲಾಗಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News