ಜಮ್ಮುಕಾಶ್ಮೀರ: ಶಂಕಿತ ಉಗ್ರರಿಂದ ನಾಗರಿಕನ ಹತ್ಯೆ

Update: 2019-03-15 17:49 GMT

ಜಮ್ಮುಕಾಶ್ಮೀರ, ಮಾ. 15: ನಾಗರಿಕೋರ್ವನನ್ನು ಶಂಕಿತ ಭಯೋತ್ಪಾದಕರು ಗುರುವಾರ ರಾತ್ರಿ ಅಪಹರಿಸಿ ಹತ್ಯೆಗೈದ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ನಡೆದಿದೆ.

ಡೋಗ್ರಿಪೋರಾ ಗ್ರಾಮದ 40ರ ಹರೆಯದ ಮಂಝೂರ್ ಅಹ್ಮದ್ ಲೋನೆಯನ್ನು ಶಂಕಿತ ಉಗ್ರರು ಬಲವಂತವಾಗಿ ಮನೆಯಿಂದ ಹೊರಗೊಯ್ದು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಗೋಲ್ಜಾರ್‌ಪೋರಾದ ಅವಂತಿಪೋರಾದಲ್ಲಿ ಗುರುವಾರ ರಾತ್ರಿ ಓರ್ವ ವ್ಯಕ್ತಿಯನ್ನು ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಆತನನ್ನು ಡೋಗ್ರಿಪೋರಾದ ಮಂಝೂರ್ ಅಹ್ಮದ್ ಲೋನೆ ಎಂದು ಗುರುತಿಸಲಾಗಿದೆ. ಲೋನೆಯನ್ನು ಮನೆಯಿಂದ ಬಲವಂತವಾಗಿ ಹೊರಗೊಯ್ದು ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News