ಮನೆ ಬಾಡಿಗೆ ಕೊಡುವುದಾಗಿ ವಂಚನೆ: ಆರೋಪಿ ಬಂಧನ

Update: 2019-03-15 17:56 GMT

ಬೆಂಗಳೂರು, ಮಾ.15: ವೆಬ್‌ಸೈಟ್‌ಗಳಲ್ಲಿ ಮನೆಗಳನ್ನು ಬಾಡಿಗೆ ಕೊಡುವುದಾಗಿ ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿ ಅಬ್ದುಲ್ ರಹೀಂ(47) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರತ್ತಹಳ್ಳಿ ವ್ಯಾಪ್ತಿಯಲ್ಲಿನ ಫ್ಲಾಟ್‌ಗಳನ್ನು ಬಾಡಿಗೆ ಹಾಗೂ ಲೀಝ್ ಗೆ ಕೊಡುವುದಾಗಿ ವೆಬ್‌ಸೈಟ್‌ಗಳಲ್ಲಿ ಜಾಹೀರಾತು ನೀಡಿ ಆ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ ಫ್ಲಾಟ್‌ಗಳಿಗೆ ತಾನೇ ಮಾಲಕನೆಂದು ಸುಳ್ಳು ಹೇಳಿ ನಕಲಿ ಕಾಗದದಲ್ಲಿ ಬರೆದುಕೊಟ್ಟು ಲಕ್ಷಾಂತರ ಹಣ ಪಡೆದು ವಂಚಿಸಿದ್ದನು ಎನ್ನಲಾಗಿದೆ.

ಈತನ ವಿರುದ್ಧ ಇದುವರೆಗೂ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ. ವಂಚಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಹೆಸರನ್ನು ಬದಲಾಯಿಸಿಕೊಂಡು ಸುಳ್ಳು ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News