ನಾನು ಮೋದಿ ಇದ್ದಂತೆ; ಅವರಿಗೆ ಪತ್ನಿ ಇಲ್ಲ, ನನಗೆ ಪತ್ನಿ ಇದ್ದಾಳೆ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ

Update: 2019-03-16 16:51 GMT

ಕಲಬುರ್ಗಿ, ಮಾ. 16: ‘ನಾನು ಒಂದು ರೀತಿಯಲ್ಲಿ ಪ್ರಧಾನಿ ಮೋದಿ ಇದ್ದಂತೆಯೇ. ಪ್ರಧಾನಿ ಮೋದಿಯವರಿಗೆ ಪತ್ನಿ ಇಲ್ಲ. ಆದರೆ, ನನಗೆ ಪತ್ನಿ ಇದ್ದಾಳೆ, ಅಷ್ಟೇ ವ್ಯತ್ಯಾಸ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ

ಶನಿವಾರ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಡಾ. ಉಮೇಶ್ ಜಾಧವ್ ಜಯ ಗಳಿಸಿದರೆ ಕೇಂದ್ರದಲ್ಲಿ ಸಚಿವರಾಗಲಿದ್ದಾರೆ. ಉಮೇಶ್ ಜಾಧವ್ ಅವರು ಸಚಿವರಾದರೆ ಕ್ಷೇತ್ರದ ಪ್ರತಿಯೊಬ್ಬರೂ ಮಂತ್ರಿ ಇದ್ದಂತೆ. ಹೀಗಾಗಿ ಉಮೇಶ್ ಜಾಧವ್ ಅವರನ್ನು ಬಹುಮತದಿಂದ ಗೆಲ್ಲಿಸಿದರೆ ನಿಮ್ಮೆಲ್ಲರ ಪಾದಕ್ಕೆ ನಾನು ನಮಸ್ಕಾರ ಮಾಡುತ್ತೇನೆ ಎಂದು ಚಿಂಚನಸೂರು ತಮ್ಮದೆ ದಾಟಿಯಲ್ಲಿ ಮತದಾರರಿಗೆ ಮನವಿ ಮಾಡಿದರು.

ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಳೇ ಪರ್ವತವಿದ್ದಂತೆ. ಆ ಪರ್ವತ ನಿಧಾನವಾಗಿ ಕುಸಿಯುತ್ತಿದ್ದು, ಒಂದು ದಿನ ಬೀಳಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆಗೆ ಚಿಂಚನಸೂರು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News