ಮಾಲ್‌ಗಳಲ್ಲಿ ಸ್ವಚ್ಛತೆ ಕೊರತೆ: ಬಿಬಿಎಂಪಿ ದಿಢೀರ್ ದಾಳಿ

Update: 2019-03-16 17:12 GMT

ಬೆಂಗಳೂರು, ಮಾ.16: ಬೃಹತ್ ಶಾಪಿಂಗ್ ಮಾಲ್‌ಗಳ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ದಿಢೀರ್ ದಾಳಿ ಮಾಡುವ ಮೂಲಕ 13.15 ಲಕ್ಷ ರೂ.ಗಳನ್ನು ದಂಡ ವಿಧಿಸಲಾಗಿದೆ.

ಶನಿವಾರ ಬಿಬಿಎಂಪಿಯ ಆರೋಗ್ಯ ಇಲಾಖೆ ಏಕಕಾಲದಲ್ಲಿ ಆರು ಬೃಹತ್ ಮಾಲ್‌ಗಳ ಮೇಲೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದ್ದು, ದಾಳಿ ಸಮಯಯದಲ್ಲಿ ಸ್ವಚ್ಛತೆ ಕಾಪಾಡದ, ಹಸಿ-ಒಣ ಕಸ ಬೇರ್ಪಡಿಸದೇ ಇದ್ದ ಹಾಗೂ ಸರಕಾರದಿಂದ ನಿಷೇಧಿಸಿರುವ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುತ್ತಿದ್ದ ಹಲವು ಹೊಟೇಲ್‌ಗಳು, ಫುಡ್‌ಕೋರ್ಟ್ ಮಳಿಗೆಗಳು ಹಾಗೂ ವಾಣಿಜ್ಯ ಉದ್ದಿಮೆಗಳಿಂದ 1,010 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು 13,15,000 ರೂ.ಗಳನ್ನು ದಂಡ ವಿಧಿಸಿರುವುದಾಗಿ ಮುಖ್ಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News