ನ್ಯೂಝಿಲ್ಯಾಂಡ್‌ನ ಮಸೀದಿಯಲ್ಲಿ ದಾಳಿ: ಗುಜರಾತ್‌ನ ಒಂದೇ ಕುಟುಂಬದ ಇಬ್ಬರು ನಾಪತ್ತೆ

Update: 2019-03-16 17:12 GMT

ವಡೋದರಾ, ಮಾ. 16: ನ್ಯೂಝಿಲ್ಯಾಂಡ್ ಎರಡು ಮಸೀದಿಗಳಲ್ಲಿ ನಡೆದ ಉಗ್ರ ದಾಳಿಯ ಸಂದರ್ಭ ಗುಜರಾತ್‌ನ ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ನಾಪತ್ತೆಯಾಗಿದ್ದಾರೆ. ಅಲ್ ನೂರ್ ಮಸೀದಿಯಲ್ಲಿ ದಾಳಿ ನಡೆಯುವ ಸಂದರ್ಭ ತಂದೆ-ಮಗ ಆರಿಫ್ ಹಾಗೂ ರಮೀಝ್ ವೊಹ್ರಾ ಶುಕ್ರವಾರದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಈ ಇಬ್ಬರೊಂದಿಗೆ ಯಾವುದೇ ಸಂಪರ್ಕ ಇಲ್ಲದ ಹಿನ್ನೆಲೆಯಲ್ಲಿ ಕುಟಂಬದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಲ್ಲಿ ನೆರವು ಕೋರಿದೆ.

 ರಮೀಝ್ ವೊಹ್ರಾ ಕಳೆದ ಏಳೆಂಟು ವರ್ಷಗಳಿಂದ ನ್ಯೂಝಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದಾರೆ. ‘‘ನನ್ನ ಸಹೋದರ ಆರಿಫ್ ಹಾಗೂ ಅವರ ಪತ್ನಿ ರುಕ್ಸಾನ 25 ದಿನಗಳ ಹಿಂದೆ ಅಲ್ಲಿಗೆ ತೆರಳಿದ್ದಾರೆ. ರಮೀಝ್ ಅವರ ಪತಿ ಖುಷ್ಬೂಗೆ ಹೆರಿಗೆಯಾಗಿದ್ದು, ಮಗುವನ್ನು ನೋಡಿಕೊಳ್ಳಲು ಅವರು ಅಲ್ಲಿಗೆ ಹೋಗಿದ್ದಾರೆ” ಎಂದು ಆರಿಫ್ ವೊಹ್ರಾ ಅವರ ಸಹೋದರ ಮೊಹ್ಸಿನ್ ವೊಹ್ರಾ ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆಯುವ ಸಂದರ್ಭ ರಮೀಝ್ ಹಾಗೂ ಆರಿಫ್ ಅಲ್ ನೂರ್ ಮಸೀದಿಗೆ ಶುಕ್ರವಾರದ ಪ್ರಾರ್ಥನೆಗೆ ತೆರಳಿದ್ದರು. ದಾಳಿ ನಡೆದ ನಂತರ ಅವರ ಬಗ್ಗೆ ಯಾವುದೇ ಸುದ್ದಿ ಇಲ್ಲ. ಅವರ ಸ್ಥಿತಿಗತಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮೊಹ್ಸಿನ್ ತಿಳಿಸಿದ್ದಾರೆ.

“ನನ್ನ ಸಹೋದರ ಆರಿಫ್ ವೊಹ್ರಾ ಹಾಗೂ ರಮೀಝ್ ವೊಹ್ರಾ ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಸೀದಿಯಲ್ಲಿ ದಾಳಿ ನಡೆದ ಬಳಿಕ ಅವರು ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ್ದಾರೋ ಇಲ್ಲವೋ ಎಂಬ ಬಗ್ಗೆ ನಮಗೆ ತಿಳಿದಿಲ್ಲ. ನಿನ್ನೆ ಅವರೊಂದಿಗೆ ಸಂಪರ್ಕದಲ್ಲಿ ಇದ್ದೆ. ಕೂಡಲೇ ಮಾಹಿತಿ ನೀಡುವಂತೆ ನಾನು ಭಾರತ ಸರಕಾರದಲ್ಲಿ ವಿನಂತಿಸುತ್ತೇನೆ” ಎಂದು ಆರಿಫ್ ಅವರ ಇನ್ನೋರ್ವ ಸಹೋದರ ಸೈಫಿಲ್ ವೊಹ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News