'ಜೀವಶಾಸ್ತ್ರ ಪಶ್ನೆ ಪತ್ರಿಕೆ ಕಠಿಣ': ಪರಿಶೀಲನೆಗೆ ಸಮಿತಿ ರಚನೆ- ಬೋರ್ಡ್ ನಿರ್ದೇಶಕ ಜಾಫರ್

Update: 2019-03-16 17:14 GMT

ಬೆಂಗಳೂರು, ಮಾ.16: ದ್ವಿತೀಯ ಪಿಯು ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಕ್ಲಿಷ್ಟಕರವಾಗಿ ನೀಡಲಾಗಿತ್ತು ಎಂದು ವಿದ್ಯಾರ್ಥಿಗಳು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಇದರ ಪರಿಶೀಲನೆಗಾಗಿ ಸಮಿತಿ ರಚಿಸಲಾಗಿದೆ ಎಂದು ಬೋರ್ಡ್ ನಿರ್ದೇಶಕ ಜಾಫರ್ ತಿಳಿಸಿದ್ದಾರೆ.

ಗುರುವಾರ ದ್ವಿತೀಯ ಪಿಯು ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆದಿತ್ತು. ಪ್ರಶ್ನೆ ಪತ್ರಿಕೆ ಕಠಿಣವಾಗಿರುವುದರ ಕುರಿತು ವಿದ್ಯಾರ್ಥಿಗಳು ಸಹಾಯವಾಣಿ ಮೂಲಕ ಪಿಯು ಬೋರ್ಡ್‌ಗೆ ದೂರು ನೀಡಿದ್ದರು. ಈ ಸಂಬಂಧ ಮೂವರು ಸದಸ್ಯರ ಸಮಿತಿ ರಚನೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ.

ಪ್ರಶ್ನೆಗಳು ಪಠ್ಯದ ಒಳಗೆ ನೀಡಲಾಗಿದೆಯಾ ಅಥವಾ ಪಠ್ಯ ಬಿಟ್ಟು ನೀಡಲಾಗಿದೆಯಾ ಎಂಬುದನ್ನು ಪ್ರಧಾನವಾಗಿ ಗಮನಿಸಲಾಗುತ್ತದೆ. ಸಮಿತಿಯ ವರದಿ ಬಂದ ಬಳಿಕ ಗ್ರೇಸ್ ಮಾರ್ಕ್ಸ್ ಬಗ್ಗೆ ನಿರ್ಧಾರ ಮಾಡಲಾಗುವುದು. ಪಠ್ಯದ ಒಳಗೆಯೆ ಪ್ರಶ್ನೆಗಳನ್ನು ಕೇಳಿದ್ದರೆ, ಗ್ರೇಸ್ ಮಾರ್ಕ್ಸ್ ಕೊಡುವ ಅಗತ್ಯ ಬೀಳುವುದಿಲ್ಲವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News