ವಾಯು ಮಾಲಿನ್ಯ : ಕ್ರಿಯಾ ಯೋಜನೆ ಸಲ್ಲಿಸಲು 6 ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶನ

Update: 2019-03-17 17:21 GMT

ಹೊಸದಿಲ್ಲಿ, ಮಾ. 17: ವಾಯು ಗುಣಮಟ್ಟವನ್ನು ನಿಗದಿತ ಮಾನದಂಡದ ಒಳಗೆ ತರಲು ಎಪ್ರಿಲ್ 30ರ ಒಳಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 6 ರಾಜ್ಯಗಳಿಗೆ ಸೂಚಿಸಿದೆ. ಇದಕ್ಕೆ ವಿಫಲವಾದಲ್ಲಿ ರಾಜ್ಯಗಳು ಪರಿಸರ ಪರಿಹಾರವಾಗಿ ತಲಾ 1 ಕೋ. ರೂ. ಪಾವತಿಸಲು ಬಾಧ್ಯಸ್ಥರಾಗಿರುತ್ತಾರೆ ಎಂದು ನ್ಯಾಯಾಧಿಕರಣ ಹೇಳಿದೆ.

ನಿಗದಿತ ಅವಧಿ ಒಳಗಡೆ ತಮ್ಮ ಕ್ರಿಯಾ ಯೋಜನೆ ಸಲ್ಲಿಸುವಂತೆ ಅಸ್ಸಾಂ, ಜಾರ್ಖಂಡ್, ಮಹಾರಾಷ್ಟ್ರ, ಪಂಜಾಬ್, ಉತ್ತಾರಖಂಡ ಹಾಗೂ ನಾಗಾಲ್ಯಾಂಡ್ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠ ಹೇಳಿದೆ. ಯಾವ ರಾಜ್ಯಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲು ನಿರ್ದೇಶಿಸಲಾಗಿತ್ತೋ ಆ ರಾಜ್ಯಗಳು ತತ್‌ಕ್ಷಣ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಎಸ್.ಪಿ. ವಾಂಗ್ಡಿ ಹಾಗೂ ಕೆ. ರಾಮಕೃಷ್ಣ ಅವರನ್ನು ಕೂಡ ಒಳಗೊಂಡ ಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News