ಇಂದಿರಾಗಾಂಧಿ ಜನಿಸಿದ ಕೊಠಡಿಯ ಫೋಟೊವನ್ನು ಟ್ವೀಟ್ ಮಾಡಿದ ಪ್ರಿಯಾಂಕಾ

Update: 2019-03-18 07:30 GMT

ಲಕ್ನೋ, ಮಾ.18:ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರವಿವಾರ ಉತ್ತರಪ್ರದೇಶದಲ್ಲಿ ತನ್ನ ಚುನಾವಣಾ ಅಭಿಯಾನ ಆರಂಭಿಸಿದ್ದು, ಪ್ರಯಾಗ್‌ರಾಜ್‌ನಲ್ಲಿರುವ ತನ್ನ ಅಜ್ಜಿ, ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಜನಿಸಿರುವ ಪೂರ್ವಜರ ಮನೆಯಲ್ಲಿ ಒಂದು ರಾತ್ರಿ ಕಳೆದಿದ್ದಾರೆ.

ಇಂದಿರಾಗಾಂಧಿ ಜನಿಸಿರುವ ಸ್ವರಾಜ್ ಭವನದ ಕೊಠಡಿಯ ಫೋಟೊವನ್ನು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

  ‘‘ಸ್ವರಾಜ್ ಭವನದಲ್ಲಿ ಕುಳಿತ್ತಿದ್ದಾಗ ನನ್ನ ದಾದಿ(ಅಜ್ಜಿ)ಜನಿಸಿರುವ ಕೊಠಡಿಯನ್ನು ನೋಡಿದೆ. ನಾನು ರಾತ್ರಿ ಮಲಗುವ ಮೊದಲು ನನ್ನ ಅಜ್ಜಿ ನನಗೆ ಕೋನ್ ಅಫ್ ಆರ್ಕ್ ಕಥೆಯನ್ನು ಹೇಳುತ್ತಿದ್ದರು. ಅವರ ಧ್ವನಿ ನನ್ನ ಹೃದಯದಲ್ಲಿ ಈಗಲೂ ಅನುರಣಿಸುತ್ತಿದೆ. ನೀನು ಧೈರ್ಯವಾಗಿರು, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು’’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಇಂದಿರಾ ಗಾಂಧಿ 1917ರಲ್ಲಿ ನ.19 ರಂದು ಸ್ವರಾಜ್ ಭವನದಲ್ಲಿ ಜನಿಸಿದ್ದರು. ತನ್ನ ಜೀವನದ ಆರಂಭಿಕ ದಿನಗಳನ್ನು ಇಲ್ಲೇ ಕಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News