ಸೆನೆಟರ್ ತಲೆಗೆ ಮೊಟ್ಟೆ ಒಡೆದ ಯುವಕನಿಗೆ ಹರಿದು ಬಂತು ನೆರವಿನ ಮಹಾಪೂರ

Update: 2019-03-18 08:26 GMT

ಸಿಡ್ನಿ, ಮಾ.18: ನ್ಯೂಝಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ಇತ್ತೀಚೆಗೆ ಉಗ್ರ ದಾಳಿಯಲ್ಲಿ ಕನಿಷ್ಠ 50 ಮಂದಿ ಬಲಿಯಾದ ಪ್ರಕರಣದ ಕುರಿತಾದ ತಮ್ಮ ಪ್ರತಿಕ್ರಿಯೆಯಲ್ಲಿ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದ ಆಸ್ಟ್ರೇಲಿಯಾದ ಬಲಪಂಥೀಯ ಸೆನೆಟರ್ ಫ್ರೇಸರ್ ಆ್ಯನ್ನಿಂಗ್ ಅವರ ತಲೆಗೆ ಯುವಕನೊಬ್ಬ ಮೊಟ್ಟೆ ಒಡೆದ ಘಟನೆಯ ವೀಡಿಯೋ ವೈರಲ್ ಆಗಿ ಆತ `ಎಗ್ ಬಾಯ್' ಎಂದೇ ಜನಜನಿತನಾಗಿದ್ದಾನೆ.

ಇದೀಗ ಆತನಿಗೆ ಸಹಾಯ ಮಾಡಲೆಂದು ನಿಧಿ ಸಂಗ್ರಹಿಸಲು ``ಗೋಫಂಡ್ ಮಿ'' ಫಾರ್ `ಎಗ್ ಬಾಯ್' ಸ್ಥಾಪಿಸಲಾಗಿದ್ದು, ಈ ಮೂಲಕ 50,000 ಡಾಲರ್ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 43,603 ಡಾಲರ್ ಸಂಗ್ರಹಿಸಲಾಗಿದೆ ಎಂದು ಗೋಫಂಡ್‍ ಮಿ ಅಡ್ಮಿನ್ ಹೇಳಿದ್ದಾರೆ.

ಎಗ್ ಬಾಯ್ ಗೆ ವಕೀಲರ ಶುಲ್ಕ ಭರಿಸಲು ಈ ಹಣ ಬಳಸಬಹುದಾದರೂ ಆತ ಮಸೀದಿ ದಾಳಿಯ ಸಂತ್ರಸ್ತರಿಗೆ ಈ ಹಣ ಉಪಯೋಗಿಸಲು ನಿರ್ಧರಿಸಿದ್ದಾನೆ. ಈ ಯುವಕ ಸಚಿವರ ತಲೆಗೆ ಮೊಟ್ಟೆಯಿಂದ ಬಡಿದಿದ್ದೇ ತಡ ಆತ ಟ್ವಿಟರ್ ನಲ್ಲಿ ಜಾಗತಿಕವಾಗಿ ಟ್ರೆಂಡಿಂಗ್ ಆಗಿದ್ದನಲ್ಲದೆ ಆತನಿಗೆ ಬೆಂಬಲದ ಮಹಾಪೂರವೇ ಹರಿದು ಬಂದಿತ್ತು.

ಘಟನೆಯ ನಂತರ ಆತನನ್ನು ಬಂಧಿಸಲಾಗಿತ್ತಾದರೂ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರ್ರಿಸನ್ ತಮ್ಮ ಸಚಿವರ ವಿವಾದಿತ ಹೇಳಿಕೆಗಳನ್ನು ಖಂಡಿಸಿದ ನಂತರ ಆತನನ್ನು ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News