ದೇಶಕ್ಕೆ ಸಮರ್ಥ ಪ್ರಧಾನಿಯ ಅಗತ್ಯವಿದೆ ಹೊರತು ‘ಚೌಕೀದಾರ’ನಲ್ಲ: ಮೋದಿಯನ್ನು ಟೀಕಿಸಿದ ಯುವಕನ ವಿಡಿಯೋ ವೈರಲ್

Update: 2019-03-18 14:15 GMT

#“ಮೋದಿ ಹುಟ್ಟಿದಾಗ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಅನ್ನು ಭಾರತವು ಸ್ಥಾಪಿಸಿತ್ತು”

ಹೊಸದಿಲ್ಲಿ, ಮಾ.18: ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಆರಂಭಿಸಿದ ‘ಮೈನ್ ಭಿ ಚೌಕಿದಾರ್’ ಹ್ಯಾಶ್ ಟ್ಯಾಗ್ ಅಭಿಯಾನವನ್ನು ಟಿವಿ ಡಿಬೇಟ್ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಟೀಕಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಜ್ ತಕ್ ಚಾನೆಲ್ ನ ‘ಟಕ್ಕರ್’ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಯುವಕ ಈ ಮಾತುಗಳನ್ನಾಡಿದ್ದಾನೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರರನ್ನುದ್ದೇಶಿಸಿ ಮಾತನಾಡಿದ ಯುವಕ, “ಒಂದು ಬಾರಿ ನೀವು ಯುವಕರು ಪಕೋಡ ಮಾರುವಂತೆ ಹೇಳುತ್ತೀರಿ, ಉಳಿದ ಸಮಯಗಳಲ್ಲಿ ನೀವು ‘ಚೌಕೀದಾರ್’ ಬಗ್ಗೆ ಮಾತನಾಡುತ್ತೀರಿ. ದೇಶಕ್ಕೆ ಸಮರ್ಥ ಪ್ರಧಾನಿ ಬೇಕಾಗಿದೆ ಹೊರತು, ಚೌಕೀದಾರನಲ್ಲ” ಎಂದು ಹೇಳಿದ್ದಾನೆ.

‘ಕಳೆದ 70 ವರ್ಷಗಳಲ್ಲಿ ಯಾವ ಸಾಧನೆಯೂ ಆಗಿಲ್ಲ’ ಎಂಬ ಪ್ರಧಾನಿಯವರ ಹೇಳಿಕೆಯನ್ನು ಈ ಯುವಕ ಇದೇ ಸಂದರ್ಭ ಟೀಕಿಸಿದ್ದಾನೆ. “ಪ್ರಧಾನಿ ಹುಟ್ಟಿದಾಗ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಅನ್ನು ಭಾರತವು ಸ್ಥಾಪಿಸಿತ್ತು. ಅವರು ಯುವಕರಾಗಿ ಗಿಲ್ಲಿ ದಾಂಡು ಆಡುತ್ತಿದ್ದಾಗ ಭಾರತವು ಭಾಕ್ರಾ ನಂಗಲ್ ಅಣೆಕಟ್ಟು ನಿರ್ಮಿಸಿತ್ತು” ಎಂದು ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News