ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಈ ರಾಜ್ಯದ ಸಿಎಂ

Update: 2019-03-18 14:48 GMT

ಭುವನೇಶ್ವರ, ಮಾ.18: ಒಡಿಶಾದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತನ್ನ ತವರು ಕ್ಷೇತ್ರ ಗಂಜಾಂ ಜಿಲ್ಲೆಯ ಹಿಂಜಿಲಿಯ ಜೊತೆಗೆ ಬಾರಗಡ ಜಿಲ್ಲೆಯ ಬಿಜೆಪುರ ಕ್ಷೇತ್ರದಿಂದಲೂ ಕಣಕ್ಕಿಳಿಯಲಿದ್ದಾರೆ.

21 ಲೋಕಸಭಾ ಸ್ಥಾನಗಳ ಪೈಕಿ ಒಂಭತ್ತು ಮತ್ತು 147 ವಿಧಾನಸಭಾ ಸ್ಥಾನಗಳ ಪೈಕಿ 54 ಸ್ಥಾನಗಳಿಗೆ ಬಿಜೆಡಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಟ್ನಾಯಕ್ ಸೋಮವಾರ ಬಿಡುಗಡೆಗೊಳಿಸಿದರು.

ಒಡಿಶಾದಲ್ಲಿ ಲೋಕಸಭಾ ಕ್ಷೇತ್ರಗಳು ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಮತದಾನವು ಎ.11,18,23 ಮತ್ತು 29 ಹೀಗೆ ನಾಲ್ಕು ಹಂತಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News