ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಅಸದುದ್ದೀನ್ ಉವೈಸಿ ನಾಮಪತ್ರ ಸಲ್ಲಿಕೆ

Update: 2019-03-18 15:00 GMT

ಹೈದರಾಬಾದ್.ಮಾ.18: ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಅವರು ಸೋಮವಾರ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ತನ್ನ ನಾಮಪತ್ರವನ್ನು ಸಲ್ಲಿಸಿದರು. ಎ.11ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

‘‘ಹೈದರಾಬಾದ್ ಲೋಕಸಭಾ ಕ್ಷೇತ್ರವು ಭಾರತದ ಹಿಂದುಳಿದವರು, ಶೋಷಿತರ ಮತ್ತು ದುರ್ಬಲರ ಪರ ಧ್ವನಿಯಾಗಿದೆ. ದೇವರು ಬಯಸಿದರೆ ಆ ಧ್ವನಿಯು ಮುಂದುವರಿಯುತ್ತದೆ’’ ಎಂದು ಉವೈಸಿ ಟ್ವೀಟಿಸಿದ್ದಾರೆ. ಅವರು 2004ರಿಂದಲೂ ಸತತವಾಗಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ.

ಉವೈಸಿಯವರನ್ನು ಬೆಂಬಲಿಸುವುದಾಗಿ ಆಡಳಿತಾರೂಢ ಟಿಆರ್‌ಎಸ್ ಈಗಾಗಲೇ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News