ನೀರವ್ ಮೋದಿ ವಿರುದ್ಧ ಬಂಧನ ವಾರಂಟ್ ಜಾರಿ

Update: 2019-03-18 16:05 GMT

ಹೊಸದಿಲ್ಲಿ, ಮಾ. 18: ಲಂಡನ್‌ನ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬಹುಕೋಟಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಇಂಗ್ಲೆಂಡ್‌ನಲ್ಲಿ ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆ ಇದೆ.

ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಜಾರಿ ನಿರ್ದೇಶನಾಲಯ 2018 ಆಗಸ್ಟ್‌ನಲ್ಲಿ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಯಾವುದೇ ಕ್ಷಣದಲ್ಲಿ ನೀರವ್ ಮೋದಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಗಡಿಪಾರು ಮನವಿಗೆ ಇಂಗ್ಲೆಂಡ್‌ನ ಗೃಹ ಕಾರ್ಯದರ್ಶಿ ಸಾಜಿದ್ ಜಾವೀದ್ ಸಹಿ ಹಾಕಿದ್ದಾರೆ.

ನೀರವ್ ಮೋದಿ ಬಂಧನದಿಂದ ಲಂಡನ್‌ನ ವೆಸ್ಟ್‌ಮೈನರ್ ನ್ಯಾಯಾಲಯದಲ್ಲಿ ಅವರ ವಿರುದ್ಧದ ವಿಚಾರಣೆ ಆರಂಭವಾಗಲಿದೆ. ನ್ಯಾಯಾಲಯ ನಿರ್ಧರಿಸಿದಲ್ಲಿ ಇಂಗ್ಲೆಂಡ್ ಸರಕಾರ ಅವರನ್ನು ಭಾರತಕ್ಕೆ ಗಡಿಪಾರು ಮಾಡಲಿದೆ. ಆದರೆ, ಈ ಆದೇಶದ ವಿರುದ್ಧ ನೀರವ್ ಮೋದಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News