ಐಎಎಸ್-ಕೆಎಎಸ್ ಪರೀಕ್ಷೆಗೆ ಉಚಿತ ತರಬೇತಿ

Update: 2019-03-18 16:53 GMT

ಬೆಂಗಳೂರು, ಮಾ.18: ಇಂಡಿಯನ್ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಅಕಾಡಮಿ ವತಿಯಿಂದ ಮಾ.21ರಿಂದ ಮೂರು ತಿಂಗಳ ಕಾಲ ಕೆ.ಆರ್.ಪುರಂನಲ್ಲಿರುವ ಅಕಾಡಮಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಅಕಾಡೆಮಿಯ ನಿರ್ದೇಶಕಿ ಕೆ.ಆರ್.ಕಲಾ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ, ಕನ್ನಡ ಮಾಧ್ಯಮದ ಮತ್ತು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೂರು ತಿಂಗಳ ಕಾಲ ಕೆಎಎಸ್, ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ, ಕೆಪಿಟಿಸಿಎಲ್, ಪಿಡಿಬ್ಲುಡಿ ಮತ್ತು ಆರ್‌ಆರ್‌ಬಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಬೋಧಕರಿಂದ ವಿಷಯವಾರು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಎರಡು ಬ್ಯಾಚ್‌ಗಳ ಮೂಲಕ ತರಬೇತಿ ನೀಡಲಾಗುವುದು. ಅಕಾಡೆಮಿಯಲ್ಲಿ ಗ್ರಂಥಾಲಯ ಮತ್ತು ವಸತಿ ವ್ಯವಸ್ಥೆ ಲಭ್ಯವಿದ್ದು, ಆಸಕ್ತಿಯುಳ್ಳ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 91084 40145 ಅನ್ನು ಸಂಪರ್ಕಿಸಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News