ಕೂಲಿ ವೆಚ್ಚ ಮರು ಪಾವತಿಗೆ ಲಂಚ: ರೇಶ್ಮೆ ವಲಯಾಧಿಕಾರಿ ಎಸಿಬಿ ಬಲೆಗೆ

Update: 2019-03-18 17:01 GMT

ಬೆಂಗಳೂರು, ಮಾ. 18: ಉದ್ಯೋಗ ಖಾತರಿ ಯೋಜನೆಯಡಿ ತನ್ನ ಜಮೀನಿನಲ್ಲಿ ರೇಶ್ಮೆ ನಾಟಿ ಮಾಡಿ, ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಹನಿ ನೀರಾವರಿ ಸಾಮಗ್ರಿಗಳು-ಕೂಲಿಯ ವೆಚ್ಚಗಳನ್ನು ಮರುಪಾವತಿಗೆ ಲಂಚದ ಬೇಡಿಕೆ ಇಟ್ಟ ಮಧುಗಿರಿ ರೇಶ್ಮೆ ವಲಯಾಧಿಕಾರಿ ಎಸಿಬಿ ಬಲಗೆ ಸಿಕ್ಕಿ ಬಿದ್ದಿದ್ದಾರೆ.

ಬಲೆಗೆ ಬಿದ್ದ ಅಧಿಕಾರಿಯನ್ನು ಎಂ.ವಿ.ರಾಮಕೃಷ್ಣಯ್ಯ, ರೇಶ್ಮೆ ವಲಯಾಧಿಕಾರಿ, ಮಧುಗಿರಿ ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ, ಹೊಸಕೆರೆ ಗ್ರಾಮದ ನಿವಾಸಿ ಕೂಲಿ ವೆಚ್ಚ ಮರುಪಾವತಿಗೆ ಅರ್ಜಿ ಸಲ್ಲಿಸಿದ್ದು, ಹಣ ಬಿಡುಗಡೆಗೆ 33 ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು.

ದೂರುದಾರರಿಂದ 33 ಸಾವಿರ ರೂ.ಲಂಚದ ಹಣವನ್ನು ಪಡೆಯುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದಿದ್ದಾರೆ. ಆರೋಪಿ ರಾಮಕೃಷ್ಣಯ್ಯ ಅವರನ್ನು ಬಂಧಿಸಿದ್ದು, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News