ನಾರಾಯಣ ನೇತ್ರಾಲಯಕ್ಕೆ ಐಎಸ್‌ಒ ಮಾನ್ಯತೆ

Update: 2019-03-18 17:11 GMT

ಬೆಂಗಳೂರು, ಮಾ. 18: ನಗರದ ನಾರಾಯಣ ನೇತ್ರಾಲಯದ ವೈದ್ಯಕೀಯ ಪ್ರಯೋಗಾಲಯದ ಗುಣಮಟ್ಟದ ಸೇವೆಗೆ ಐಎಸ್‌ಒ ಮಾನ್ಯತೆ ಸಿಕ್ಕಿದ್ದು, ಐಎಸ್‌ಒ ಮಾನ್ಯತೆ ಪಡೆದ ಬೆಂಗಳೂರಿನ ಪ್ರಥಮ ಕಣ್ಣಾಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಐಎಸ್‌ಒ ಮಾನ್ಯತೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ನೇತ್ರಾಲಯದ ಅಧ್ಯಕ್ಷ ಡಾ.ಕೆ. ಭುಜಂಗ ಶೆಟ್ಟಿ, ರೋಗಪರೀಕ್ಷೆ ಮತ್ತು ಆರೈಕೆಯಲ್ಲಿ ಅತ್ಯಂತ ಮುಖ್ಯ. ಅವು ವೈದ್ಯರು ಮತ್ತು ರೋಗಿಗಳ ಅಗತ್ಯವನ್ನು ಪೂರೈಸುತ್ತವೆ ಎನ್ನುವುದನ್ನು ದೃಢೀಕರಿಸುತ್ತದೆ ಎಂದು ಹೇಳಿದರು.

ನಾರಾಯಣ ನೇತ್ರಾಲಯದ ಮಾಲಿಕ್ಯುಲರ್ ಡಯಾಗ್ನೊಸಿಸ್ ಲ್ಯಾಬ್ಸ್ ಪರೀಕ್ಷೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ. ಉನ್ನತ ತರಬೇತಿ ಪಡೆದ ಕುಶಲ ತಜ್ಞರಿದ್ದಾರೆ. ಎಚ್1ಎನ್1 ಪರೀಕ್ಷೆ ಮಾಡುವ ಕೆಲವೇ ಲ್ಯಾಬ್‌ಗಳಲ್ಲಿದ್ದು, ಇದು ಒಂದಾಗಿದೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುಮೋದನೆ ಪಡೆದಿದೆ ಎಂದರು.

ಐಎಸ್‌ಒ ಮಾನ್ಯತೆ ಪಡೆಯುವುದು ಗುಣಮಟ್ಟದ ಆರೋಗ್ಯಸೇವೆಯಲ್ಲಿ ನಮ್ಮ ದೃಢೀಕೃತ ಗುಣಮಟ್ಟಕ್ಕೆ ಮಾನ್ಯತೆಯಾಗಿದೆ. ನಾವು ಗುಣಮಟ್ಟದಲ್ಲಿ ಅತ್ಯುತ್ತಮ ಮಾನದಂಡಗಳನ್ನು ಕಾಪಾಡಿಕೊಳ್ಳುವುದನ್ನು ಮುಂದುವರೆಸುತ್ತೇವೆ ಎಂದು ಅವರು ಇದೇ ವೇಳೆ ತಿಳಿಸಿದರು.

ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿ ಕೆ.ವಿ.ಆರ್.ಠಾಗೂರ್, ಕ್ವಾಲಿಟಿ ಅಂಡ್ ಅಕ್ರೆಡಿಟೇಷನ್ ಇನ್ಸ್‌ಟಿಟ್ಯೂಟ್‌ನ ಡಾ.ಭೂಪೇಂದ್ರ ಕುಮಾರ್ ರಾಣಾ ಮತ್ತು ಫೌಂಡೇಷನ್ ಫಾರ್ ಕ್ವಾಲಿಟಿ ಇಂಡಿಯಾ(ಎಫ್‌ಕ್ಯೂಐ) ಸಿಇಒ ಡಾ.ವೆಂಕಟೇಶ್ ತುಪ್ಪಿಲ್ ಅವರು ಐಎಸ್‌ಒ ಮಾನ್ಯತಾ ಪತ್ರವನ್ನು ಇದೇ ವೇಳೆ ಡಾ.ಭುಜಂಗ ಶೆಟ್ಟಿ ಅವರಿಗೆ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News