ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ ಬದಲು

Update: 2019-03-18 18:12 GMT

ಬೆಂಗಳೂರು, ಮಾ.18: ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ಮೆಮು ರೈಲಿನ ವೇಳಾಪಟ್ಟಿ ಬದಲಾಗಿದ್ದು, ಇನ್ನು ಮುಂದೆ ವಾರದಲ್ಲಿ 6 ದಿನಗಳ ಕಾಲ ಉಭಯ ನಗರಗಳ ನಡುವೆ ರೈಲು ಸಂಚಾರ ನಡೆಸಲಿದೆ.

ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಮೆಮು ರೈಲು 06575/06576 ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಸೋಮವಾರದಿಂದ ನೂತನ ವೇಳಾಪಟ್ಟಿ ಜಾರಿಗೆ ಬಂದಿದ್ದು, ಸೋಮವಾರದಿಂದ ಶನಿವಾರದ ತನಕ ಇನ್ನು ಮುಂದೆ ರೈಲು ಸಂಚರಿಸಲಿದೆ.

ಹೊಸ ವೇಳಾಪಟ್ಟಿ ಅನ್ವಯ ಬೆಂಗಳೂರಿನಿಂದ ರೈಲು 8.20ರ ಬದಲು ಸಂಜೆ 5.20ಕ್ಕೆ ರೈಲು ಹೊರಡಲಿದೆ. ರಾತ್ರಿ 10.40ರ ಬದಲು 7.50ಕ್ಕೆ ಮೈಸೂರು ನಗರವನ್ನು ತಲುಪಲಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ರೈಲು ರಾತ್ರಿ 8.30ಕ್ಕೆ ಹೊರಡಲಿದ್ದು, 11.35ಕ್ಕೆ ಬೆಂಗಳೂರು ತಲುಪಲಿದೆ. ಸದ್ಯ 11.05ಕ್ಕೆ ರೈಲು ಮೈಸೂರಿನಿಂದ ಹೊರಡುತ್ತಿದೆ. ಬೆಂಗಳೂರು ಮತ್ತು ರಾಮನಗರ ಸಂಚಾರ ನಡೆಸುತ್ತಿದ್ದ 66539/66540 ರೈಲುಗಳನ್ನು ಸೋಮವಾರದಿಂದ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News