ಎಲ್ಲಾ ಪಕ್ಷೇತರ ಅಭ್ಯರ್ಥಿಗಳಿಗೆ ಲಿಬರಲ್ ಅಂಡ್ ರೆವಲ್ಯೂಷನರಿ ಸಿಟಿಜನ್ಸ್‌ ಬೆಂಬಲ

Update: 2019-03-18 18:14 GMT

ಬೆಂಗಳೂರು, ಮಾ.18: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಎಲ್ಲ ಪಕ್ಷೇತರ ಅಭ್ಯರ್ಥಿಗಳಿಗೆ ಇಂಡಿಯನ್ ಲಿಬರಲ್ ಅಂಡ್ ರೆವಲ್ಯೂಷನರಿ ಸಿಟಿಜನ್ಸ್ ಆಫ್ ಕರ್ನಾಟಕ ಸಂಘಟನೆ ಸಂಪೂರ್ಣ ಬೆಂಬಲ ಸೂಚಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಸ್ಥಾಪಕ ಡಾ.ವಿನಕುಮಾರ್, ಜಾತಿ, ಲಿಂಗ ಧರ್ಮ, ಭಾಷೆ ಮತ್ತು ಪ್ರಾಂತ್ಯ ಯಾವುದನ್ನೂ ಉದ್ದೇಶವಾಗಿಸಿಕೊಳ್ಳದೇ ದೇಶದ ಸರ್ವತೋಮುಖ ಏಳಿಗೆ ಮತ್ತು ಅಭಿವೃದ್ಧಿಗೆ ದುಡಿಯುವ ಗುರಿ ಹೊಂದಿರುವ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿಗಳಿಗೆ ಸಂಘಟನೆಯು ಸಂಪೂರ್ಣ ಬೆಂಬಲ ನೀಡುವುದರ ಜೊತೆಗೆ ಚುನಾವಣೆಯಲ್ಲಿ ಎಲ್ಲರೂ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಿದ್ದೇವೆ ಎಂದು ತಿಳಿಸಿದರು.

ಕಾನೂನು ಸಲಹೆ, ಐಟಿ ವಿಷಯಕ್ಕೆ ಸಂಬಂಧಿಸಿದ ಸಲಹೆ ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಮತದಾರರಿಗೆ ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಸಂಘಟನೆಯಿಂದ ಮಾಹಿತಿ ಒದಗಿಸಲಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ನಾನು ಸಹ ಪಕ್ಷೇತರವಾಗಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News