ಲೋಕಸಭಾ ಚುನಾವಣೆ: ಜಾಮ್‌ನಗರ್ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ರವೀಂದ್ರ ಜಡೇಜ ಪತ್ನಿ

Update: 2019-03-19 05:22 GMT

 ಜಾಮ್‌ನಗರ್, ಮಾ.19: ಕ್ರಿಕೆಟಿಗ ರವೀಂದ್ರ ಜಡೇಜರ ಪತ್ನಿ ರಿವಾಬಾ ಜಡೇಜ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ಜಾಮ್‌ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಪಾಟಿದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್‌ರನ್ನು ಸ್ಪರ್ಧೆಗಿಳಿಸುವ ಸಾಧ್ಯತೆಯಿದೆ.

ರಿವಾಬಾ ಇತ್ತೀಚೆಗೆ ಗುಜರಾತ್‌ನ ಕರ್ಣಿ ಸೇನಾದ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.

ಕ್ಷತ್ರೀಯ ಸಮುದಾಯದ ಬೆಂಬಲ ಪಡೆದಿರುವ ರಿವಾಬಾ ಬಿಜೆಪಿಗೆ ಸೇರ್ಪಡೆಯಾಗಿದ್ದು, ರಾಜಕೀಯಕ್ಕೆ ಧುಮುಕಲು ಸಜ್ಜಾಗಿದ್ದಾರೆ.

ಜಾಮ್‌ನಗರ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿಯ ಪೂನಂ ಮಾಡಮ್ ಪ್ರತಿನಿಧಿಸುತ್ತಿದ್ದಾರೆ. 2014ರಲ್ಲಿ ಪೂನಂ ತನ್ನ ಚಿಕ್ಕಪ್ಪ ಕಾಂಗ್ರೆಸ್‌ನ ಹಿರಿಯ ನಾಯಕ ವಿಕ್ರಮ್ ಮಾಡಮ್‌ರನ್ನು ಸೋಲಿಸಿದ್ದರು.

ಗುಜರಾತ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿದ್ದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇದೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ನ ಎಲ್ಲ 26 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News