ದೇಶದ ಪ್ರಪ್ರಥಮ ಲೋಕಪಾಲರಾಗಿ ಪಿನಾಕಿ ಚಂದ್ರ ಘೋಷ್ ನೇಮಕ

Update: 2019-03-19 17:22 GMT

ಹೊಸದಿಲ್ಲಿ,ಮಾ.19: ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ನ್ಯಾ.ಪಿನಾಕಿ ಚಂದ್ರ ಘೋಷ್ ಅವರು ಭಾರತದ ಪ್ರಪ್ರಥಮ ಲೋಕಪಾಲರಾಗಿ ಮಂಗಳವಾರ ನೇಮಕಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ,ಭಾರತದ ಮುಖ್ಯ ನ್ಯಾಯಾಧೀಶರು,ಲೋಕಸಭಾ ಸ್ಪೀಕರ್ ಮತ್ತು ಓರ್ವ ಗಣ್ಯ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡ ಆಯ್ಕೆ ಸಮಿತಿಯು ಕಳೆದ ವಾರ ತನ್ನ ಸಭೆ ಸೇರಿ ಘೋಷ್ ಅವರ ಹೆಸರನ್ನು ಅಂತಿಮಗೊಳಿಸಿತ್ತು.

ಇದಕ್ಕೂ ಮುನ್ನ ಲೋಕಪಾಲ ಶೋಧ ಸಮಿತಿಯು ಸಿದ್ಧಗೊಳಿಸಿದ್ದ ಕಿರುಪಟ್ಟಿಯಲ್ಲಿನ ಪ್ರಮುಖ ಹೆಸರುಗಳಲ್ಲಿ ನ್ಯಾ.ಘೋಷ್ ಸೇರಿದ್ದರು.

ಘೋಷ್ ಸುಮಾರು ನಾಲ್ಕು ವರ್ಷಗಳ ಅಧಿಕಾರಾವಧಿಯ ಬಳಿಕ ಮೇ 2017ರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತರಾಗಿದ್ದರು. ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದರು.

ಲೋಕಪಾಲ ಕಾಯ್ದೆ ಜಾರಿಗೆ ಬಂದ ಐದು ವರ್ಷಗಳ ಬಳಿಕ ಈ ನೇಮಕ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News