ಪೊಲ್ಲಾಚಿ ಲೈಂಗಿಕ ಹಗರಣ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಕ್ಕೀರನ್ ಗೋಪಾಲ್

Update: 2019-03-19 17:17 GMT

ಚೆನ್ನೈ, ಮಾ. 19: ಪೊಲ್ಲಾಚಿ ಲೈಂಗಿಕ ಹಗರಣದ ಕುರಿತಂತೆ ಬಿಡುಗಡೆ ಮಾಡಲಾದ ವೀಡಿಯೋಗೆ ಸಂಬಂಧಿಸಿ ತಮಿಳು ಪಾಕ್ಷಿಕ ‘ನಕ್ಕೀರನ್’ ಸಂಪಾದಕ ಆರ್. ಗೋಪಾಲ್ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

“ಡೆಪ್ಯುಟಿ ಸ್ಪೀಕರ್ ಪೊಲ್ಲಾಚಿ ಜಯರಾಮನ್ ನೀಡಿದ ದೂರಿನ ಆಧಾರದಲ್ಲಿ ಸೈಬರ್ ಕ್ರೈಮ್ ಘಟಕ ಮಾಹಿತಿ ತಂತ್ರಜ್ಞಾನ ಕಾಯ್ದೆ ಒಳಗೊಂಡಂತೆ ವಿವಿಧ ಕಲಂ ಅಡಿಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ. “ಇಂತಹ ಪ್ರಕರಣಗಳನ್ನು ನನ್ನ ವಿರುದ್ಧ ಹೇರಿರುವುದು ದೊಡ್ಡ ವಿಚಾರ ಅಲ್ಲ. ಆದರೆ, ಇದು ಸ್ಪಷ್ಟವಾಗಿ ಅಧಿಕಾರದ ದುರ್ಬಳಕೆ. ಪೊಲ್ಲಾಚಿ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳನ್ನು ಇತರ ಮಾದ್ಯಮಗಳು ಪ್ರಕಟಿಸದಂತೆ ಬೆದರಿಕೆ ಹುಟ್ಟಿಸುವ ಉದ್ದೇಶವನ್ನು ಈ ದೂರು ಹೊಂದಿದೆ” ಎಂದು ಗೋಪಾಲ್ ಹೇಳಿದ್ದಾರೆ. ಕೊಯಂಬತ್ತೂರಿನ ಪೊಲ್ಲಾಚಿ ಸಮೀಪ ಪೆಬ್ರವರಿ 12ರಂದು ನಾಲ್ವರ ತಂಡ ಕಾರಿನಲ್ಲಿ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News