ಅತ್ಯಂತ ದೊಡ್ಡ ಕೃತಕ ದ್ವೀಪ ನಿರ್ಮಾಣಕ್ಕೆ ಹಾಂಕಾಂಗ್ ಮುಂದು

Update: 2019-03-20 13:43 GMT

 ಹಾಂಕಾಂಗ್, ಮಾ. 19: ಜಗತ್ತಿನ ಅತ್ಯಂತ ದೊಡ್ಡ ಕೃತಕ ದ್ವೀಪವೊಂದನ್ನು ನಿರ್ಮಿಸಲು ಹಾಂಕಾಂಗ್ ಮುಂದಾಗಿದ್ದು, ಇದಕ್ಕಾಗಿ ಅದು 79 ಬಿಲಿಯ ಡಾಲರ್ (ಸುಮಾರು 5.45 ಲಕ್ಷ ಕೋಟಿ ರೂಪಾಯಿ) ವೆಚ್ಚ ಮಾಡಲಿದೆ.

 ಹಾಂಕಾಂಗ್ ನಗರ ಎದುರಿಸುತ್ತಿರುವ ತೀವ್ರ ಮನೆ ಕೊರತೆಯನ್ನು ನಿವಾರಿಸುವುದಕ್ಕಾಗಿ ಅದರ ದೊಡ್ಡ ದ್ವೀಪ ಲಾಂಟಾವುನ ಸುತ್ತಮುತ್ತಲಿನ 2,471 ಎಕರೆ ಸ್ಥಳವನ್ನು ಜಮೀನಾಗಿ ಪರಿವರ್ತಿಸುವ ಬೃಹತ್ ಯೋಜನೆ ಇದಾಗಿದೆ.

2032ರ ವೇಳೆಗೆ ಜನರು ಅಲ್ಲಿಗೆ ಸ್ಥಳಾಂತರಗೊಳ್ಳುವ ನಿರೀಕ್ಷೆಯನ್ನು ಅಧಿಕಾರಿಗಳು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News