ಗುಜರಾತ್: ಆರ್.ಟಿ.ಐ. ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ

Update: 2019-03-21 04:50 GMT

ಅಹ್ಮದಾಬಾದ್, ಮಾ.21: ಶನಿವಾರ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿರುವ ಟಿವಿ9 ಪತ್ರಕರ್ತ ಚಿರಾಗ್ ಪಟೇಲ್ ಅವರು ಮಾಹಿತಿ ಹಕ್ಕಿನಡಿ ಆಗಾಗ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ತಿಳಿದು ಬಂದಿದೆ. 

ಚಿರಾಗ್ ಅವರು ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯ ಬಳಕೆ ಕುರಿತು ವಿವರ ಕೇಳಿ ಆರ್.ಟಿ.ಐ. ಅರ್ಜಿ ಸಲ್ಲಿಸಿದ್ದರು ಎಂದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ. 

ಚಿರಾಗ್ ಸಲ್ಲಿಸಿರುವ ಆರ್.ಟಿ.ಐ. ಕುರಿತ ದಾಖಲೆಗಳನ್ನು ಪೊಲೀಸರು ತನಿಖೆಗಾಗಿ ವಶಪಡಿಸಿಕೊಂಡಿದ್ದಾರೆ. 

ಚಿರಾಗ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಿರುವ ಅವರ ಸೋದರ ಜೈಮಿನ್ ಪಟೇಲ್ ಕೂಡ ತನ್ನ ಸೋದರ ಆರ್.ಟಿ.ಐ ಅರ್ಜಿಗಳನ್ನು ಸಲ್ಲಿಸುತ್ತಿದ್ದ. ಆದರೆ ಅದರಲ್ಲಿ ಕೇಳಿದ ಪ್ರಶ್ನೆಗಳು ಹಾಗೂ ಉತ್ತರಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಇಂದು ಬೆಳಗ್ಗೆ ಪೊಲೀಸರು ಮನೆಗೆ ವಿಚಾರಣೆಗೆ ಬಂದಿದ್ದರು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News