‘ಚೌಕಿದಾರ್’ ಈಗ ದೇಶಭಕ್ತಿ, ಪ್ರಾಮಾಣಿಕತೆಗೆ ಇನ್ನೊಂದು ಅರ್ಥ: ಪ್ರಧಾನಿ ಮೋದಿ

Update: 2019-03-21 10:48 GMT

ಹೊಸದಿಲ್ಲಿ, ಮಾ.21: ‘ಚೌಕಿದಾರ್ ಚೋರ್ ಹೇ’ ಎನ್ನುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಪ್ರಧಾನಿ ನರೇಂದ್ರ ಮೋದಿ, "ಕಾವಲುಗಾರರನ್ನು ರಾಹುಲ್ ಅವಮಾನಿಸಿದ್ದಾರೆ. ಚೌಕಿದಾರ್ ಎನ್ನುವ ಪದ ಇದೀಗ ರಾಷ್ಟ್ರೀಯತೆ ಮತ್ತು ಪ್ರಾಮಾಣಿಕತೆಯ ಇನ್ನೊಂದು ಅರ್ಥವಾಗಿದೆ" ಎಂದು ಬಣ್ಣಿಸಿದ್ದಾರೆ.

ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಕಾವಲುಗಾರರ ಜತೆ ಸಂವಾದ ನಡೆಸಿದ ಅವರು, “ರಾಜಕೀಯ ವಿರೋಧಿಗಳಿಗೆ ನನ್ನ ಹೆಸರು ಹೇಳಿ ನೇರವಾಗಿ ದಾಳಿ ಮಾಡುವ ಧೈರ್ಯ ಇಲ್ಲ. ಇದರ ಬದಲು ಕಾವಲುಗಾರರನ್ನು ಗುರಿ ಮಾಡಿ ದಾಳಿ ನಡೆಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಪ್ರಧಾನಿ ಪದೇ ಪದೇ ತಮ್ಮನ್ನು ಚೌಕಿದಾರ್ ಎಂದು ಕರೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಹುಲ್‍ ಗಾಂಧಿ ‘ಚೌಕಿದಾರ್ ಚೋರ್ ಹೇ’ ಎಂಬ ಘೋಷಣೆಯಡಿ ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News