ಹುಲಿಯನ್ನೇ ಕೊಂದು ತಿಂದ ಹುಲಿ!

Update: 2019-03-23 04:22 GMT

ಮಂಡ್ಲ (ಮಧ್ಯಪ್ರದೇಶ), ಮಾ.23: ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ 12 ವರ್ಷದ ಹುಲಿಯೊಂದನ್ನು ಮತ್ತೊಂದು ಹುಲಿ ಕೊಂದು ತಿಂದ ಘಟನೆ ಬೆಳಕಿಗೆ ಬಂದಿದೆ. ಕನ್ಹಾ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ವರದಿಯಾದ ಎರಡನೇ ಪ್ರಕರಣ ಇದಾಗಿದೆ.

ಹುಲಿಗಳ ನಡುವಿನ ಗಡಿ ಸಂಘರ್ಷದಲ್ಲಿ ಹನ್ನೆರಡು ವರ್ಷದ ಹುಲಿಯನ್ನು ಮತ್ತೊಂದು ಹುಲಿ ಕೊಂದಿರಬೇಕು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಕೆಟಿಆರ್ ಕ್ಷೇತ್ರ ನಿರ್ದೇಶಕ ಎಲ್.ಕೃಷ್ಣಮೂರ್ತಿ ಹೇಳಿದ್ದಾರೆ. ಮೃತ ಹೆಣ್ಣುಹುಲಿಯನ್ನು ಟಿ-36 ಎಂದು ಗುರುತಿಸಲಾಗಿದ್ದು, ಗುರುವಾರ ಗಸ್ತು ತಂಡಕ್ಕೆ ಇದರ ಕಳೇಬರ ಸಿಕ್ಕಿದೆ.

ಎಂಟು ವರ್ಷದ ಮತ್ತೊಂದು ಹುಲಿ (ಟಿ-56), ಹತ್ಯೆಗೀಡಾದ ಹುಲಿಯನ್ನು ಭಾಗಶಃ ತಿಂದುಹಾಕಿದ್ದನ್ನು ಗಸ್ತು ತಂಡ ಪತ್ತೆ ಮಾಡಿದೆ. ಕೆಟಿಆರ್‌ನ ಕಿಸ್ಲಿ ವಲಯದ ಮಗರ್‌ನಾಲಾ ಅರಣ್ಯದಲ್ಲಿ ಈ ಘಟನೆ ನಡೆದಿದೆ ಎಂದು ಕೃಷ್ಣಮೂರ್ತಿ ವಿವರಿಸಿದ್ದಾರೆ.

ಅರಣ್ಯ ತಂಡ ಈ ಪ್ರದೇಶದ ಮೇಲೆ ನಿಗಾ ಇರಿಸಿದೆ. ಕಳೆದ ಜನವರಿಯಲ್ಲಿ ಗಂಡುಹುಲಿಯೊಂದನ್ನು ಹೆಣ್ಣುಹುಲಿ ಕೊಂದು ಭಕ್ಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News