ಬಿಜೆಪಿ ಸಂಚು: ಮಹಾರಾಷ್ಟ್ರದಲ್ಲಿ 40 ಲಕ್ಷ ಮತದಾರರ ಹೆಸರು ನಾಪತ್ತೆ ಎಂದ ಜೆಡಿಎಸ್

Update: 2019-03-23 17:52 GMT

ಮುಂಬೈ, ಮಾ. 23: ಬಿಜೆಪಿಯ ರಾಜಕೀಯ ಸಂಚಿನ ಒಂದು ಭಾಗವಾಗಿ ಮತದಾರರ ಪಟ್ಟಿಯಲ್ಲಿರುವ ಮಹಾರಾಷ್ಟ್ರದ ಸುಮಾರು 40 ಲಕ್ಷ ಮತದಾರರ ಹೆಸರು ನಾಪತ್ತೆಯಾಗಿದೆ ಎಂದು ಜೆಡಿಎಸ್ ಹೇಳಿದೆ.

 ಹೈದರಾಬಾದ್ ಮೂಲದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಉಲ್ಲೇಖಿಸಿರುವ ಜೆಡಿಎಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನ್ಯಾಯಮೂರ್ತಿ (ನಿವೃತ್ತ) ಬಿ.ಜಿ. ಕೋಸ್ಲೆ ಪಾಟಿಲ್, ಮತದಾರರ ಪಟ್ಟಿಯಿಂದ 39,27,882 ಅಥವಾ ಶೇ. 4.6 ಮತದಾರರ ಹೆಸರು ನಾಪತ್ತೆಯಾಗಿದೆ ಎಂದಿದ್ದಾರೆ. 39,27,882 ಹೆಸರುಗಳಲ್ಲಿ 17 ಲಕ್ಷ ಮತದಾರರು ದಲಿತರು, 10 ಲಕ್ಷ ಮತದಾರರು ಮುಸ್ಲಿಮರು. ಇದು ರಾಜಕೀಯ ಲಾಭಕ್ಕಾಗಿ ಬಿಜೆಪಿ ನಡೆಸಿದ ಸಂಚು ಎಂದು ಬಾಂಬೆ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಮೂರ್ತಿ ಯಾಗಿದ್ದ ಪಾಟಿಲ್ ಹೇಳಿದ್ದಾರೆ.

ಮಿಸ್ಸಿಂಗ್ ವೋಟರ್ ಆ್ಯಪ್‌ನ ಸ್ಥಾಪಕ, ಐಟಿ ಎಂಜಿನಿಯರ್ ಖಾಲಿದ್ ಸೈಫುಲ್ಲಾ ನಾಪತ್ತೆಯಾದ ಮತದಾರರ ಸಂಖ್ಯೆಯನ್ನು ಅಂದಾಜಿಸಲು ಈ ಸಮೀಕ್ಷೆ ನಡೆಸಿದ್ದಾರೆ. ಮತದಾರರ ಪಟ್ಟಿಯಲ್ಲಿ 3 ಕೋಟಿ ಮುಸ್ಲಿಮರು ಸಹಿತ ಸರಿಸುಮಾರು 12.7 ಕೋಟಿ ಮತದಾರರ ಹೆಸರು ನಾಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News