‘ಗೋಲನ್ ಹೈಟ್ಸ್’ ನಿಲುವು ಬದಲಾವಣೆ: ಟ್ರಂಪ್‌ಗೆ ಎಲ್ಲೆಡೆಯಿಂದ ಟೀಕೆ

Update: 2019-03-23 17:56 GMT

ವಾಶಿಂಗ್ಟನ್, ಮಾ. 23: ಗೋಲನ್ ಹೈಟ್ಸ್ ತನಗೆ ಸೇರಿದ್ದು ಎಂಬ ಇಸ್ರೇಲ್‌ನ ಹೇಳಿಕೆಗೆ ಬೆಂಬಲ ಸೂಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟೊಂದನ್ನು ಮಾಡಿದ್ದಾರೆ. ಆದರೆ, ಈ ಟ್ವೀಟ್ ವಾಸ್ತವಿಕವಾಗಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ. ಆದರೆ, ಈ ವಲಯದ ಪ್ರಮುಖ ಭಾಗೀದಾರರು ಟ್ರಂಪ್‌ರ ಟ್ವೀಟನ್ನು ಖಂಡಿಸಿದ್ದಾರೆ ಹಾಗೂ ಅವರ ಬಹುನಿರೀಕ್ಷಿತ ಪಶ್ಚಿಮ ಏಶ್ಯ ಶಾಂತಿ ಉಪಕ್ರಮವನ್ನು ಇದು ಇನ್ನಷ್ಟು ಅನಿಶ್ಚಿತತೆಗೆ ದೂಡುವ ಸಾಧ್ಯತೆಯೂ ಇದೆ.

ಗೋಲನ್ ಹೈಟ್ಸನ್ನು ಇಸ್ರೇಲ್ 1967ರಲ್ಲಿ ಸಿರಿಯದಿಂದ ವಶಪಡಿಸಿಕೊಂಡಿತ್ತು.

ಟ್ರಂಪ್‌ರ ನಿಲುವನ್ನು ಸಿರಿಯ ಪ್ರತಿಭಟಿಸಿದೆ ಹಾಗೂ ‘ಎಲ್ಲ ಲಭ್ಯ ವಿಧಾನಗಳ’ ಮೂಲಕ ಅದನ್ನು ಮರುವಶಪಡಿಸಿಕೊಳ್ಳುವುದಾಗಿ ಹೇಳಿದೆ. ಸಿರಿಯದ ಮಿತ್ರದೇಶಗಳಾದ ರಶ್ಯ ಮತ್ತು ಇರಾನ್ ಕೂಡ ಟ್ರಂಪ್ ನಿಲುವನ್ನು ಖಂಡಿಸಿವೆ.

ಅದೇ ವೇಳೆ, ಅಮೆರಿಕದ ಮಿತ್ರ ದೇಶಗಳಾದ ಐರೋಪ್ಯ ಒಕ್ಕೂಟ ಮತ್ತು ಟರ್ಕಿಗಳೂ ಟ್ರಂಪ್ ಹೇಳಿಕೆಯನ್ನು ಟೀಕಿಸಿವೆ ಹಾಗೂ ಗೋಲನ್ ಹೈಟ್ಸನ್ನು ಆಕ್ರಮಿತ ಪ್ರದೇಶ ಎಂಬುದಾಗಿ ಪರಿಗಣಿಸುವುದನ್ನು ಮುಂದುವರಿಸುವುದಾಗಿ ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News