ಭಾರತದ ಶೇ. 7 ಆರ್ಥಿಕ ಬೆಳವಣಿಗೆ ಬಗ್ಗೆ ರಘುರಾಮ್ ರಾಜನ್ ಸಂದೇಹ

Update: 2019-03-26 15:48 GMT

ಹೊಸದಿಲ್ಲಿ, ಮಾ. 26: ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸದ ಹೊರತಾಗಿಯೂ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯುತ್ತಿದೆ ಎಂಬ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ ರಾಜನ್ ಮಂಗಳವಾರ ಸಂದೇಹ ವ್ಯಕ್ತಪಡಿಸಿದ್ದಾರೆ.

 ದತ್ತಾಂಶದ ಮೇಲ್ವಿಚಾರಣೆ ನೋಡಿಕೊಳ್ಳಲು ನಿಷ್ಪಕ್ಷಪಾತ ಸಮಿತಿ ನಿಯೋಜಿಸುವುದರಿಂದ ಜಿಡಿಪಿ ಮೇಲೆ ಪ್ರಸ್ತುತ ಕವಿದ ಕಾರ್ಮೋಡವನ್ನು ಸರಿಸಬಹುದು ಎಂದು ಅವರು ಹೇಳಿದ್ದಾರೆ. “ಪ್ರಸಕ್ತ ಅಂಕಿ-ಅಂಶ ಏನನ್ನು ಹೇಳುತ್ತದೆ ಎಂಬುದು ನನಗೆ ತಿಳಿದಿಲ್ಲ. ಆದುದರಿಂದ ಭಾರತದ ನಿಜವಾದ ಪ್ರಗತಿಯ ದರ ಏನು ಎಂಬುದನ್ನು ತಿಳಿದುಕೊಳ್ಳಲು ಅಂಕಿ-ಅಂಶವನ್ನು ಮರು ಸಂಘಟಿಸಬೇಕಾದ ಅಗತ್ಯ ಇದೆ” ಎಂದು ಅವರು ಹೇಳಿದರು.

ನಾವು ಶೇ. 7 ಬೆಳವಣಿಗೆ ದರ ದಾಖಲಿಸಿದರೂ ಉದ್ಯೋಗವಿಲ್ಲ ಯಾಕೆ ಎಂದು ಸಚಿವರೊಬ್ಬರು (ನರೇಂದ್ರ ಮೋದಿ ಸರಕಾರದ) ಪ್ರಶ್ನಿಸಿದ್ದಾರೆ. ಶೇ. 7ರಷ್ಟು ಬೆಳವಣಿಗೆ ಆಗದೇ ಇರುವುದೇ ಇದಕ್ಕೆ ಕಾರಣವಿರಬಹುದು ಎಂದು ರಘುರಾಮ ರಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News