ಬಿಯರ್ ಪ್ರಿಯರ ಜೇಬಿಗೆ ಕತ್ತರಿ: ಎ.1ರಿಂದ ದರ ದುಬಾರಿ

Update: 2019-03-26 17:12 GMT

ಬೆಂಗಳೂರು, ಮಾ.26: ಮುಂಬರುವ ಏಪ್ರಿಲ್‌ನಿಂದ ಬಿಯರ್ ದರ ದುಬಾರಿಯಾಗಲಿರುವ ಪರಿಣಾಮದಿಂದ ಬಿಯರ್ ಪ್ರಿಯರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.

ಬಜೆಟ್‌ನಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಎ.1 ರಿಂದ ಬಿಯರ್ ಬೆಲೆ ಬಾಟಲ್‌ಗೆ ಕನಿಷ್ಠ 15 ರೂ.ನಿಂದ 20 ರೂ. ರವರೆಗೆ ಹೆಚ್ಚಳವಾಗಲಿದೆ. ಸಾಮಾನ್ಯವಾಗಿ ಬಿಯರ್ ಕಂಪನಿಗಳು ಬೇಸಿಗೆ ವೇಳೆಯಲ್ಲಿ ದರ ಏರಿಕೆಗೆ ಬೇಡಿಕೆ ಇಟ್ಟು ಅಬಕಾರಿ ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳುತ್ತವೆ. ಈ ಬಾರಿ ಸರಕಾರವೇ ಬಿಯರ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದು, ಬಜೆಟ್‌ನಲ್ಲಿ ಘೋಸಿರುವಂತೆ ಎ.1 ರಿಂದ ಬೆಲೆ ಹೆಚ್ಚಳವಾಗಲಿದ್ದು, ಪ್ರತಿ ಬಾಟಲ್ ಗೆ 15 ರೂ.ನಿಂದ 20 ರೂ. ಜಾಸ್ತಿಯಾಗಲಿದೆ. ಹೀಗಾಗಿ, ಗ್ರಾಹಕರು ಹೆಚ್ಚಿನ ಸಂಖ್ಯೆಯ ಸರಕನ್ನು ಸಂಗ್ರಹಿಸಲು ಮುಂದಾಗಿದ್ದಾರೆ.

ಇನ್ನು, ರಾಜ್ಯ ಸರಕಾರ ಬಿಯರ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದೆ. ಗ್ರಾಹಕರಿಗೆ ಹೊರೆಯಾಗುವುದು ಬೇಡ ಎಂಬ ಕಾರಣದಿಂದ ಕಂಪನಿಗಳು ತಮ್ಮ ಮೂಲ ಬೆಲೆಯನ್ನು ಹೆಚ್ಚಿಸಿಲ್ಲ. ಹಾಲಿ ಎಂ.ಆರ್.ಪಿ.ದರಕ್ಕೆ ತೆರಿಗೆ ಸೇರಿಸಿ ದರವನ್ನು ಪರಿಷ್ಕರಿಸಲಾಗಿದ್ದು, ಪ್ರೀಮಿಯರ್ ಬಿಯರ್ ಬೆಲೆ 300 ಎಂಎಲ್ ಬಾಟಲ್‌ಗೆ 110 ರೂ. ನಿಂದ 125 ರೂ. ಆಗಲಿದೆ. 650 ಎಂಎಲ್ ಬಾಟಲ್ ಬೆಲೆ 150 ರೂ.ನಿಂದ 170 ರೂ.ಗೆ ಏರಿಕೆಯಾಗಲಿದೆ. ಇದರೊಂದಿಗೆ ಟಿನ್ ಬಿಯರ್ ಸೇರಿ ವಿವಿಧ ಮಾದರಿ ಬಿಯರ್‌ಗಳ ಬೆಲೆಗಳಲ್ಲಿಯೂ ಹೆಚ್ಚಳವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News