ಮಲ್ಯರ ವಿಲಾಸಿ ಬದುಕಿಗೆ ಕೊಂಚ ಕಡಿವಾಣ?

Update: 2019-04-04 17:52 GMT

ಲಂಡನ್, ಎ. 4: ಭಾರತೀಯ ಬ್ಯಾಂಕ್‌ಗಳಿಗೆ 10 ಸಾವಿರ ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಮಾಜಿ ಉದ್ಯಮಿ ವಿಜಯ ಮಲ್ಯರ ವಿಲಾಸಿ ಜೀವನಕ್ಕೆ ಕೊಂಚ ಕಡಿವಾಣ ಬೀಳುವ ಸಾಧ್ಯತೆಯಿದೆ.

ತಮ್ಮ ಕಕ್ಷಿದಾರನು ತನ್ನ ಖರ್ಚನ್ನು ತಿಂಗಳಿಗೆ 29,500 ಪೌಂಡ್ (ಸುಮಾರು 27 ಲಕ್ಷ ರೂಪಾಯಿ)ಗೆ ಇಳಿಸಲು ಒಪ್ಪಿಕೊಂಡಿದ್ದಾರೆ ಎಂಬುದಾಗಿ ಮಲ್ಯರ ವಕೀಲರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಕ್ಕೆ ತಿಳಿಸಿದ್ದಾರೆ.

ಸ್ಟೇಟ್‌ಬ್ಯಾಂಕ್ ಸೇರಿದಂತೆ ವಿವಿಧ ಭಾರತೀಯ ಬ್ಯಾಂಕ್‌ಗಳಿಂದ ತೆಗೆದ ಸಾಲವನ್ನು ಮಲ್ಯ ಇನ್ನೂ ಪಾವತಿಸಿಲ್ಲ.

ಸದ್ಯ ವಿಜಯ ಮಲ್ಯ ಜೀವನಕ್ಕಾಗಿ ತಿಂಗಳಿಗೆ ಸುಮಾರು 70 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ.

ಮಲ್ಯರ ಐಸಿಐಸಿಐ ಬ್ಯಾಂಕ್‌ನ ಬ್ರಿಟನ್ ಪಿಎಲ್‌ಸಿ ಖಾತೆಯಲ್ಲಿರುವ ಸುಮಾರು 2,58,000 ಪೌಂಡ್ (ಸುಮಾರು 2.34 ಕೋಟಿ ರೂಪಾಯಿ) ಹಣವನ್ನು ಮುಟ್ಟುಗೋಲು ಹಾಕಲು ಬ್ಯಾಂಗ್‌ಗಳು ಪ್ರಯತ್ನಿಸುತ್ತಿವೆ.

ಮಲ್ಯ ಕಷ್ಟದಲ್ಲಿದ್ದಾರೆಂದು ನೋಡಿದವರಿಗೆ ಅನಿಸುತ್ತಿಲ್ಲ!

ಮಲ್ಯ ಈಗಲೂ ‘ವೈಭವೋಪೇತ ಜೀವನ’ ನಡೆಸುತ್ತಿದ್ದಾರೆ ಎಂಬುದಾಗಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯದ ವಕೀಲರು ತಮ್ಮ ಲಿಖಿತ ಅರ್ಜಿಯಲ್ಲಿ ಹೇಳಿದ್ದಾರೆ.

‘‘ಹೊರಗೆ ನಿಂತು ನೋಡುವ ವ್ಯಕ್ತಿಯೊಬ್ಬನಿಗೆ, ಮಲ್ಯ ಯಾವುದೇ ಸಂಕಷ್ಟಕ್ಕೊಳಗಾಗಿರುವುದು ಗೊತ್ತಾಗುತ್ತಿಲ್ಲ’’ ಎಂಬುದಾಗಿ ಅವರು ಹೇಳಿದ್ದಾರೆ.

‘‘ಮಲ್ಯರಿಗೆ ಇತರ ಆದಾಯ ಮೂಲಗಳಿವೆ. ಕಿಂಗ್‌ಫಿಶರ್ ಬಿಯರ್ ಯುರೋಪ್ ಲಿಮಿಟೆಡ್‌ನಿಂದ ಅವರಿಗೆ ತಿಂಗಳಿಗೆ 7,500 ಪೌಂಡ್ (ಸುಮಾರು 7 ಲಕ್ಷ ರೂಪಾಯಿ) ವೇತನ ಪಾವತಿಯಾಗುತ್ತಿದೆ. ಅದೂ ಅಲ್ಲದೆ, ಅವರ ಕೌಟುಂಬಿಕ ಸಂಪತ್ತಿನಿಂದ ಹಣ ಬರುತ್ತಿದೆ. ಅವರ ಕೌಟುಂಬಿಕ ಸಂಪತ್ತಿನ ಹೆಚ್ಚಿನ ಭಾಗಗಳನ್ನು ಟ್ರಸ್ಟ್‌ಗಳಲ್ಲಿ ವಿಲೀನಗೊಳಿಸಲಾಗಿದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News