ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಚಹಾ ರಫ್ತು ಕುಸಿತ

Update: 2019-04-05 15:11 GMT

ಕೋಲ್ಕತಾ, ಎ.5: ಈ ವರ್ಷದ ಜನವರಿ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ದೇಶದ ಚಹಾ ರಫ್ತು ಪ್ರಮಾಣ 41.60 ಮಿಲಿಯನ್ ಕೆ.ಜಿ.ಗಳಿಗೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 44.71 ಮಿ.ಕೆ.ಜಿ.ಗಳಷ್ಟಿತ್ತು.

ಈ ವರ್ಷದ ಮೊದಲ ಎರಡು ತಿಂಗಳುಗಳಲ್ಲಿ ರಫ್ತಿನ ಮೌಲ್ಯ 934.08 ಕೋ.ರೂ.ಗೇರಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 858.47 ಕೋ.ರೂ.ಆಗಿತ್ತು. 2019ರಲ್ಲಿ ರಫ್ತು ಚಹಾದ ಬೆಲೆ ಪ್ರತಿ ಕೆ.ಜಿ.ಗೆ 224.34 ರೂ.ಗೆ ಏರಿಕೆಯಾಗಿದ್ದರೆ, 2018ರ ಇದೇ ಅವಧಿಯಲ್ಲಿ ಅದು 191.97 ರೂ.ಇತ್ತು.

ಎ.2018ರಿಂದ ಫೆ.2019ರವರೆಗಿನ 11 ತಿಂಗಳ ಅವಧಿಯಲ್ಲಿ ದೇಶದ ಚಹಾ ರಫ್ತು ಪ್ರಮಾಣ 231.75 ಮಿ.ಕೆಜಿ(ಮೌಲ್ಯ 4993.07 ಕೋ.ರೂ.)ಆಗಿದ್ದರೆ, ಎ.2017-ಫೆ.2108ರ ಅವಧಿಯಲ್ಲಿ ಇದು 236.07 ಮಿ.ಕೆಜಿ(ಮೌಲ್ಯ 4676.03 ಕೋ.ರೂ.)ಗಳಾಗಿತ್ತು. ಈ ಅವಧಿಗಳಲ್ಲಿ ರಫ್ತು ಚಹಾದ ಬೆಲೆ ಪ್ರತಿ ಕೆಜಿಗೆ ಅನುಕ್ರಮವಾಗಿ 215.45 ರೂ. ಮತ್ತು 198.08 ರೂ.ಆಗಿದ್ದವು ಎಂದು ಚಹಾ ಮಂಡಳಿಯ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News