​ಆದಿತ್ಯನಾಥ್‌ಗೆ ಚುನಾವಣಾ ಆಯೋಗದಿಂದ ಪ್ರೇಮಪತ್ರ: ಕಾಂಗ್ರೆಸ್ ಟೀಕೆ

Update: 2019-04-06 14:01 GMT

ಹೊಸದಿಲ್ಲಿ, ಎ.6: ‘ಮೋದೀಜಿಯ ಸೇನೆ’ ಎಂದು ಹೇಳಿಕೆ ನೀಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ  ಆದಿತ್ಯನಾಥ್‌ಗೆ ಕೇವಲ ಎಚ್ಚರಿಕೆ ನೀಡಿರುವ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಶನಿವಾರ ಪ್ರಶ್ನಿಸಿದೆ.
ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್ ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ ಹಾಗೂ ಚುನಾವಣಾ ಆಯೋಗ ಆದಿತ್ಯನಾಥ್ಗೆ ‘ಪ್ರೇಮಪತ್ರ’ ಬರೆದಿದೆ ಎಂದು ಕಾಂಗ್ರೆಸ್ ದೂರಿದೆ.
ಕಾಂಗ್ರೆಸ್‌ನ ಕನಿಷ್ಠ ಆದಾಯ ಯೋಜನೆ ‘ನ್ಯಾಯ್’ನ್ನು ಟೀಕಿಸಿರುವ ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಪಕ್ಷಗಳು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಆ ಸಂದರ್ಭದಲ್ಲೂ ಆಯೋಗ ಮೃದು ಧೋರಣೆ ತಾಳಿತ್ತು. ‘
    
‘ಇದೀಗ ಮೋಡಲ್ ಕೋಡ್ ಆಫ್ ಕಂಡಕ್ಟ್(ಎಂಸಿಸಿ) ಎಂದರೆ ಮೋದಿ ಕೋಡ್ ಆಫ್ ಕಂಡಕ್ಟ್(ಮೋದಿ ಮಾದರಿ ನೀತಿ ಸಂಹಿತೆ ) ಆಗಿದೆ. ಆದಿತ್ಯನಾಥ್ ಭಾರತೀಯ ಸೇನೆಯನ್ನು ಅವಮಾನಿಸಿದರೆ, ಚುನಾವಣಾ ಆಯೋಗ ಅವರಿಗೆ ಪ್ರೇಮಪತ್ರವನ್ನು ಬರೆಯುತ್ತದೆ. ನೀತಿ ಆಯೋಗ ಉಪಾಧ್ಯಕ್ಷ ಕಾಂಗ್ರೆಸ್‌ನ ‘ನ್ಯಾಯ್’ ಯೋಜನೆಯನ್ನು ಟೀಕಿಸಿದಾಗ, ಇನ್ನು ಮುಂದೆ ಹಾಗೆ ಮಾಡಬೇಡಿ ಎಂದು ಆಯೋಗ ಮೃದುವಾಗಿ ಎಚ್ಚರಿಕೆ ನೀಡಿ ಸುಮ್ಮನಿರುತ್ತದೆ. ಅಧಿಕಾರದಲ್ಲಿರುವವರಿಗೆ ಸತ್ಯದ ಕನ್ನಡಿಯನ್ನು ತೋರಿಸುವುದರಿಂದ ಚುನಾವಣಾ ಆಯೋಗ ಏಕೆ ದೂರ ಸರಿಯುತ್ತಿದೆ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News