ಸಂವಿಧಾನದ 370, 35ಎ ವಿಧಿಗಳನ್ನು ತೆಗೆದುಹಾಕಬಾರದು: ಸರ್ಜಿಕಲ್ ಸ್ಟ್ರೈಕ್ ಹೀರೋ ಹೂಡಾ

Update: 2019-04-08 09:24 GMT

ಶ್ರೀನಗರ, ಎ.8: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಾಗೂ ಸಂವಿಧಾನದ ವಿಧಿ 370 ಹಾಗೂ 35ಎ ಇವುಗಳನ್ನು ರಾಜಕೀಯ ಕಾರಣಗಳಿಗಾಗಿ ಬಳಸಬಾರದು ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್, ಸರ್ಜಿಕಲ್ ಸ್ಟ್ರೈಕ್ ಹೀರೋ ಡಿ.ಎಸ್. ಹೂಡಾ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಲ್ಲಿಸಿರುವ 42 ಪುಟಗಳ ರಾಷ್ಟ್ರೀಯ ಭದ್ರತೆ ಕುರಿತಾದ ವರದಿಯಲ್ಲಿ  ಸೆಪ್ಟೆಂಬರ್ 2016ರ ಸರ್ಜಿಕಲ್ ದಾಳಿಯ ನೇತೃತ್ವ ವಹಿಸಿದ್ದ ಲೆ.ಜ. ಹೂಡಾ ಮೇಲಿನಂತೆ ಹೇಳಿದ್ದಾರಲ್ಲದೆ ಸಂವಿಧಾನದ ವಿಧಿ 370 ಹಾಗೂ 35ಎ ಅನ್ನು ತೆಗೆದು ಹಾಕಬಾರದೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

“ಹೆಚ್ಚಿನ ಸಮಸ್ಯೆಗೆ ಕಾರಣವಾಗಬಹುದಾದ ಕೆಲವೊಂದು ವಿವಾದಾತ್ಮಕ ವಿಚಾರಗಳನ್ನು ಸದ್ಯದ ಮಟ್ಟಿಗೆ ಬದಿಗೆ ಸರಿಸಬೇಕು ಹಾಗೂ ಈ ವಿಚಾರಗಳ ಬಗ್ಗೆ ರಾಜಕೀಯ ಸಹಮತ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಬೇಕು'' ಎಂದು ವರದಿ ಹೇಳಿದೆ.

ರವಿವಾರ ಪ್ರಧಾನಿ ಕೂಡ ಇದೇ ವಿಚಾರವನ್ನು ಎತ್ತಿದ್ದಾರೆ. “ಸಂವಿಧಾನದ 370 ವಿಧಿಯನ್ನು ಯಾರೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ, ಪಾಕಿಸ್ತಾನ ಕೂಡ ಇದೇ ಮಾತನ್ನು ಹೇಳುತ್ತಿದೆ” ಎಂದು ಪ್ರಧಾನಿ ಹೇಳಿದ್ದರಲ್ಲದೆ, “ಕಾಂಗ್ರೆಸ್ ಪಕ್ಷ ಜಗತ್ತಿನಾದ್ಯಂತ ಪಾಕಿಸ್ತಾನದ ಅಭಿಪ್ರಾಯವನ್ನು ಪಸರಿಸಲು ಸಹಾಯ ಮಾಡುತ್ತಿದೆ'' ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News