ರಾಜಕೀಯ ಪಕ್ಷಗಳು ಎಲ್ಲಿಂದ ಹಣ ಪಡೆಯುತ್ತವೆ ಎಂದು ಮತದಾರರು ತಿಳಿಯಬೇಕಾದ ಅಗತ್ಯವಿಲ್ಲ: ಕೇಂದ್ರ

Update: 2019-04-11 14:46 GMT

ಹೊಸದಿಲ್ಲಿ,ಎ.11: ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆ ಎನ್ನುವುದನ್ನು ಮತದಾರರು ತಿಳಿದಿರಬೇಕಾದ ಅಗತ್ಯವಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಗುರುವಾರ ಚುನಾವಣಾ ಬಾಂಡ್ಗಳ ಯೋಜನೆಯ ಕುರಿತು ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯವು ಪ್ರಕರಣದ ತೀರ್ಪನ್ನುಶುಕ್ರವಾರ ಬೆಳಿಗ್ಗೆ ಪ್ರಕಟಿಸಲಿದೆ.

ರಾಜಕೀಯ ನಿಧಿ ಸಂಗ್ರಹಕ್ಕಾಗಿ ಚುನಾವಣಾ ಬಾಂಡ್ಗಳ ಬಳಕೆಯ ವಿರುದ್ಧ ಎನ್ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿಸೀತಾರಾಮ ಯೆಚೂರಿ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.
ಚುನಾವಣಾ ಬಾಂಡ್ಗಳು ಹಣಕಾಸು ಸಾಧನಗಳಾಗಿದ್ದು,ನಾಗರಿಕರು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಇವುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ)ನಿಂದ ಖರೀದಿಸಿರಾಜಕೀಯ ಪಕ್ಷಗಳಿಗೆ ನೀಡಬಹುದು ಮತ್ತು ಅವು ಈ ಬಾಂಡ್ಗಳನ್ನು ನಗದು ಹಣವಾಗಿ ಪರಿವರ್ತಿಸಿಕೊಳ್ಳಬಹುದು. ಈ ಬಾಂಡ್ಗಳು ಅನಾಮಿಕವಾಗಿದ್ದು,ಜ.2018ರಲ್ಲಿ ಈಯೋಜನೆಯನ್ನು ಜಾರಿಗೊಳಿಸಲಾಗಿತ್ತು.

ಲೋಕಸಭಾ ಚುನಾವಣೆಗಳು ಮುಗಿಯುವವರೆಗೆ ಯೋಜನೆಯನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂಬ ಕೇಂದ್ರದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು.ಪ್ರಾಯೋಗಿಕ ನೆಲೆಯಲ್ಲಿ ಯೋಜನೆಯನ್ನು ಮುಂದುವರಿಸಲು ಅವಕಾಶ ನೀಡುವಂತೆ ವೇಣುಗೋಪಾಲ್ ನ್ಯಾಯಾಲಯವನ್ನು ಆಗ್ರಹಿಸಿದ್ದರು.
 ಕಪ್ಪುಹಣದ ನಿರ್ಮೂಲನಕ್ಕಾಗಿ ಚುನಾವಣಾ ಬಾಂಡ್ಗಳನ್ನು ಜಾರಿಗೊಳಿಸಲಾಗಿದೆಯಾದರೂ ಕಪ್ಪುಹಣವು ಚುನಾವಣೆಯ ಭಾಗವಾಗಿದೆ ಎನ್ನುವುದು ಸತ್ಯವಾಗಿದೆ. ಮತದಾರರನ್ನುಸೆಳೆಯಲು ಪ್ರತಿಯೊಂದೂ ಅಕ್ರಮ ಮಾರ್ಗವನ್ನು ಬಳಸಲಾಗುತ್ತಿದೆ,ಇದು ಜೀವನ ವಿಧಾನವಾಗಿಬಿಟ್ಟಿದೆ. ರಾಜಕೀಯ ನಾಯಕರು ಹೆಲಿಕಾಪ್ಟರ್ಗಳಲ್ಲಿ ಪ್ರಯಾಣಿಸುತ್ತಾರೆ,ಭಾರೀಮೊತ್ತದ ಹಣವನ್ನು ಖರ್ಚು ಮಾಡಲಾಗುತ್ತಿದೆ. ಈ ಹಣ ಎಲ್ಲಿಂದ ಬರುತ್ತದೆ? ಇದು ಕಪ್ಪುಹಣ ಎಂದು ವೇಣುಗೋಪಾಲ್ ಹೇಳಿದರು.
ಚುನಾವಣಾ ಬಾಂಡ್ಗಳ ಮೂಲಕ ಹಣವನ್ನು ದೇಣಿಗೆ ನೀಡುವವರ ಗುರುತು ಬಹಿರಂಗಗೊಳ್ಳದಂತೆ ಸರಕಾರವು ನೋಡಿಕೊಳ್ಳುತ್ತಿದೆ ಎಂದ ವೇಣುಗೋಪಾಲ್,ಚುನಾವಣೆಗಳುಮುಗಿಯುವವರೆಗೆ ಈ ಯೋಜನೆ ಮುಂದುವರಿಯಲಿ. ನೂತನ ಸರಕಾರವು ಅಧಿಕಾರಕ್ಕೆ ಬಂದನಂತರ ಅದು ಯೋಜನೆಯನ್ನು ಪುನರ್ಪರಿಶೀಲಿಸುತ್ತದೆ ಎಂದರು.

ಬಾಂಡ್ಗಳ ಖರೀದಿದಾರನ ಗುರುತು ಬ್ಯಾಂಕಿಗೆ ಲಭ್ಯವಾಗುತ್ತದೆಯೇ ಎಂಬ ಮು.ನ್ಯಾ.ರಂಜನ ಗೊಗೊಯಿ ಅವರ ಪ್ರಶ್ನೆಗೆ ಉತ್ತರಿಸಿದ ವೇಣುಗೋಪಾಲ್, ಕೆವೈಸಿಯಿಂದಾಗಿ ಇದುಸಾಧ್ಯವಾಗುತ್ತದೆ. ಆದರೆ ಖರೀದಿದಾರನ ವಿವರಗಳನ್ನು ಗೌಪ್ಯವಾಗಿರಿಸಲಾಗುತ್ತದೆ ಮತ್ತು ತಿಂಗಳಿಗೊಮ್ಮೆ ಕೇಂದ್ರೀಯ ಭಂಡಾರಕ್ಕೆ ರವಾನಿಸಲಾಗುತ್ತದೆ ಎಂದು ತಿಳಿಸಿದರು.

 ವ್ಯಕ್ತಿಯೋರ್ವನಿಗೆ ಯಾವ ಬಾಂಡ್ ನೀಡಲಾಗಿದೆ ಎನ್ನುವ ವಿವರಗಳು ಬ್ಯಾಂಕಿನ ಬಳಿಯಿರುತ್ತವೆಯೇ ಎಂಬ ಪ್ರಶ್ನೆಗೆ ವೇಣುಗೋಪಾಲ ನಕಾರಾತ್ಮಕ ಉತ್ತರ ನೀಡಿದಾಗಮು.ನ್ಯಾ.ಗೊಗೊಯಿ ಅವರು,ಹಾಗಿದ್ದರೆ ಕಪ್ಪುಹಣದ ವಿರುದ್ಧ ಹೋರಾಡುವ ಪ್ರಯತ್ನದ ನಿಮ್ಮ ಇಡೀ ಕಸರತ್ತು ವಿಫಲಗೊಳ್ಳುತ್ತದೆ ಎಂದು ಹೇಳಿದರು.
ಕಪ್ಪುಹಣ ನಿಯಂತ್ರಣಕ್ಕೂ ಚುನಾವಣಾ ಬಾಂಡ್ಗಳ ಯೋಜನೆಗೂ ಸಂಬಂಧವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪರವಕೀಲ ಪ್ರಶಾಂತ ಭೂಷಣ ಅವರು,ಇದು ಅನಾಮಿಕವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಹೊಸ ಮಾರ್ಗವಾಗಿದೆ ಅಷ್ಟೇ ಎಂದರು.
ಖರೀದಿಯಾಗಿರುವ 220 ಕೋಟಿ ಬಾಂಡ್ಗಳ ಪೈಕಿ 210 ಕೋಟಿ ಬಾಂಡ್ಗಳು ಬಿಜೆಪಿಗೆ ಹೋಗಿವೆ ಎಂದ ಅವರು,ಮೊದಲು ರಾಜಕೀಯ ಪಕ್ಷಕ್ಕೆ ನಗದು ಹಣವನ್ನುನೀಡಬಹುದಿತ್ತು,ಈಗ ಬ್ಯಾಂಕ್ ಮೂಲಕವೂ ದೇಣಿಗೆಯನ್ನು ಸಲ್ಲಿಸಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News