ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಗೆ ಅಮೆರಿಕ ಬಾಹ್ಯಾಕಾಶ ಕಮಾಂಡ್ ಬೆಂಬಲ

Update: 2019-04-13 16:57 GMT

ವಾಶಿಂಗ್ಟನ್, ಎ. 13: ಬಾಹ್ಯಾಕಾಶದಿಂದ ಬೆದರಿಕೆ ಇರುವ ಕಾರಣಕ್ಕಾಗಿ ಭಾರತ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂಬುದಾಗಿ ಅಮೆರಿಕದ ರಕ್ಷಣಾ ಇಲಾಖೆ ಗುರುವಾರ ಸಂಸದರಿಗೆ ಹೇಳಿದೆ.

ಈ ಮೂಲಕ, ಭಾರತದ ಕ್ರಮವನ್ನು ಬೆಂಬಲಿಸುವವರ ಪಟ್ಟಿಗೆ ಅಮೆರಿಕವೂ ಸೇರ್ಪಡೆಯಾಗಿದೆ. ಭಾರತದ ಪರೀಕ್ಷೆಯು ಬಾಹ್ಯಾಕಾಶದಲ್ಲಿ ಅವಶೇಷಗಳನ್ನು ಸೃಷ್ಟಿಸಿದೆ ಎಂಬ ಕಳವಳ ಹಲವು ವಲಯಗಳಲ್ಲಿ ವ್ಯಕ್ತವಾಗಿರುವುದನ್ನು ಸ್ಮರಿಸಬಹುದಾಗಿದೆ.

‘‘ಭಾರತದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಕಲಿತ ಮೊದಲ ಪಾಠವೆಂದರೆ, ಅವರು ಹಾಗೆ ಯಾಕೆ ಮಾಡಿದ್ದಾರೆ ಎನ್ನುವುದು’’ ಎಂದು ಅಮೆರಿಕ ಸೇನಾ ಕಮಾಂಡ್‌ನ ಮುಖ್ಯಸ್ಥ ಜನರಲ್ ಜಾನ್ ಹೈಟನ್ ಕಾಂಗ್ರೆಸ್‌ಗೆ ನೀಡಿದ ವಿವರಣೆಯ ವೇಳೆ ಹೇಳಿದರು.

‘‘ಇದಕ್ಕೆ ಉತ್ತರ ಸುಲಭ. ಬಾಹ್ಯಾಕಾಶದಿಂದ ಅವರ ದೇಶವು ಎದುರಿಸುತ್ತಿದ್ದ ಬೆದರಿಕೆಗಳ ಬಗ್ಗೆ ಅವರು ಚಿಂತಿತರಾಗಿದ್ದರು ಹಾಗೂ ಬಾಹ್ಯಾಕಾಶದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ತಮಗೆ ಬೇಕು ಎಂಬುದಾಗಿ ಅವರು ಭಾವಿಸಿದ್ದರು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News