ಶ್ವೇತಭವನದ ಹೊರಗೆ ಬೆಂಕಿ ಹಚ್ಚಿಕೊಂಡ ವ್ಯಕ್ತಿ

Update: 2019-04-13 17:37 GMT

ವಾಶಿಂಗ್ಟನ್, ಎ. 13: ವಾಶಿಂಗ್ಟನ್ ನಲ್ಲಿರುವ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿ ಶ್ವೇತಭವನದಬೇಲಿಯ ಹೊರಗೆ ವ್ಯಕ್ತಿಯೊಬ್ಬ ಶುಕ್ರವಾರ ವ್ಯಕ್ತಿಯೊಬ್ಬ ತನ್ನ ಜಾಕೆಟ್‌ ಗೆ ಬೆಂಕಿ ಹಚ್ಚಿಕೊಂಡಿದ್ದು, ಗುಪ್ತ ದಳಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಪೆನ್ಸಿಲ್ವೇನಿಯ ಅವೆನ್ಯೂನಲ್ಲಿ ಇಲೆಕ್ಟ್ರಾನಿಕ್ ಗಾಲಿಕುರ್ಚಿ ಮಾದರಿಯ ಸ್ಕೂಟರ್‌ನಲ್ಲಿದ್ದ ವ್ಯಕ್ತಿಯೊಬ್ಬ ತನ್ನಜಾಕೆಟ್‌ಗೆ ಬೆಂಕಿಹಚ್ಚಿಕೊಂಡನು ಎಂದು ಅಧ್ಯಕ್ಷರ ಭದ್ರತೆಯ ಉಸ್ತುವಾರಿ ಹೊತ್ತಿರುವ ಸೀಕ್ರೆಟ್ಸ ರ್ವಿಸ್ ಹೇಳಿದೆ.

ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದರು ಹಾಗೂ ಪ್ರಥಮ ಚಿಕಿತ್ಸೆ ನೀಡಿದರು ಎಂದುಅದು ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News