ಖಜುರಾಹೊದಿಂದ ಆರೆಸ್ಸೆಸ್ ಸೂಚಿಸಿದ ವಿ.ಡಿ. ಶರ್ಮಾರನ್ನು ಕಣಕ್ಕಿಳಿಸಿದ ಬಿಜೆಪಿ

Update: 2019-04-14 15:45 GMT

ಭೋಪಾಲ, ಎ. 14: ಮಧ್ಯಪ್ರದೇಶದ ಬುಂದೇಲ್‌ಖಂಡದ ಖಜುರಾಹೋ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಅಂತಿಮವಾಗಿ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಹಾಗೂ ಆರೆಸ್ಸೆಸ್ ಸೂಚಿಸಿದ ವಿ.ಡಿ. ಶರ್ಮಾ ಅವರನ್ನು ಘೋಷಿಸಲಾಗಿದೆ.

ಈ ಕ್ಷೇತ್ರಕ್ಕೆ ರಾಜ್ಯದ ಮೂರಕ್ಕಿಂತಲೂ ಅಧಿಕ ಅಭ್ಯರ್ಥಿಯನ್ನು ಬಿಜೆಪಿ ಸೂಚಿಸಿತ್ತು.

 ಮಧ್ಯಪ್ರದೇಶದ ಪ್ರತಿಷ್ಠಿತ 5 ಕ್ಷೇತ್ರಗಳಲ್ಲಿ ಇಂದೋರ್ ಹಾಗೂ ಭೋಪಾಲ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಉಳಿದಿದ್ದು, ಇಲ್ಲಿನ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಇನ್ನಷ್ಟೇ ಪ್ರಕಟಿಸಬೇಕಿದೆ.

 ಎಬಿವಿಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಶರ್ಮಾ ಅವರನ್ನು ಮೊದಲಿಗೆ ಮೊರೆನಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಸೂಚಿಸಲಾಗಿತ್ತು. ಅನಂತರ ಭೋಪಾಲ್ ಹಾಗೂ ಬಳಿಕ ವಿದಿಶಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಸೂಚಿಸಲಾಗಿತ್ತು. ಖಜುರಾಹೊ ಕ್ಷೇತ್ರದಲ್ಲಿ ಶರ್ಮಾ ಅವರು ರಾಜಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿರುವ ಕಾಂಗ್ರೆಸ್ ನಾಯಕಿ ಕವಿತಾ ಸಿಂಗ್ ಅವರನ್ನು ಎದುರಿಸಲಿದ್ದಾರೆ.

ಖಜುರಾಹೊ, ದಾಮೋಹ್ ಹಾಗೂ ಟಿಕಮ್‌ಗಢದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿತ್ತು. ಇದು ಬಿಜೆಪಿಯ ಒಳಗೆ ಬಂಡಾಯ ಹುಟ್ಟಿಕೊಳ್ಳಲು ಕೂಡ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News