ನೀವು ಕನ್ನಡ ಕಲಿಯಿರಿ: ನಿರ್ಮಲಾ ಸೀತಾರಾಮನ್‌ಗೆ ಮಹಿಳೆಯರ ಸಲಹೆ

Update: 2019-04-14 15:51 GMT

ಬೆಂಗಳೂರು, ಎ.14: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನೀವು ಕನ್ನಡ ಕಲಿಯಬೇಕೆಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಹಿಳೆಯರು ಸಲಹೆ ಮಾಡಿದರು.

ರವಿವಾರ ನಗರದ ಪ್ರಮುಖ ಕಡೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಈ ವೇಳೆ, ಕನ್ನಡದಲ್ಲಿ ಮತಯಾಚನೆ ಮಾಡುವಂತೆ ಮಹಿಳೆಯರು ಬೇಡಿಕೆಯಿಟ್ಟರು. ಅಷ್ಟೇ ಅಲ್ಲದೆ, ಕೆಲ ಮಹಿಳೆಯರು ಕನ್ನಡದಲ್ಲಿ ಮತಯಾಚನೆ ಮಾಡಿ ಎಂದು ಕೇಳಿಕೊಂಡರು. ಇದಕ್ಕೆ ರಕ್ಷಣಾ ಸಚಿವೆ ನನಗೆ ಕನ್ನಡ ಬರಲ್ಲ, ನಮ್ಮ ಅಭ್ಯರ್ಥಿಗೆ ಬೆಂಬಲಿಸಿ ಎಂದು ಇಂಗ್ಲೀಷ್‌ನಲ್ಲಿ ಹೇಳುತ್ತಾ ಸಾಗಿದರು.

ಇದಕ್ಕೂ ಮೊದಲು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರಕಾರ ಯಾರೊಬ್ಬರ ಆದೇಶದಂತೆ ಕೆಲಸ ಮಾಡುತ್ತಿಲ್ಲ. ಸ್ವತಂತ್ರವಾಗಿ ಕೆಲಸ ಮಾಡಿ ಒಳ್ಳೆಯ ಆಡಳಿತ ನೀಡಿದ್ದಾರೆ ಎಂದರು.

2014ರ ಲೋಕಸಭಾ ಚುನಾವಣೆಗೂ 2019ಕ್ಕೂ ದೇಶದಲ್ಲಿ ಯಾವ ಕೆಲಸಗಳಾಗಿವೆ, ಯಾವ ರೀತಿ ಅಭಿವೃದ್ಧಿಯಾಗಿದೆ ಎಂಬುದನ್ನು ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಿ, ಪ್ರಧಾನಿ ಮೋದಿಯವರನ್ನು ಗೆಲ್ಲಿಸಿ, ಮತ್ತೆ ಅವರು ಪ್ರಧಾನಿಯಾಗುವ ರೀತಿಯಲ್ಲಿ ಮತ ಹಾಕಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News