ನೀತಿ ಸಂಹಿತೆ ಉಲ್ಲಂಘನೆ: 75.63 ಕೋಟಿ ರೂ. ಮೌಲ್ಯದ ನಗದು, ಮದ್ಯ ವಶ

Update: 2019-04-14 16:26 GMT

ಬೆಂಗಳೂರು, ಎ.14: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೆಲೆನ್ಸ್ ಸ್ಕ್ವಾಡ್‌ಗಳು ಹಾಗೂ ಪೊಲೀಸ್ ಪ್ರಾಧಿಕಾರಗಳು, ಅಬಕಾರಿ ಇಲಾಖೆಯಿಂದ ಒಟ್ಟಾರೆ 75.63 ಕೋಟಿ ಮೌಲ್ಯದ ನಗದು ಹಾಗೂ ಇತರೆ ವಸ್ತುಗಳು, ಮದ್ಯ, ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾ ತಂಡಗಳು ಕಾರ್ಯಾಚರಣೆ ನಡೆಸಿ 15.34 ಕೋಟಿ ಮೌಲ್ಯದ ನಗದು, 62.14 ಲಕ್ಷ ಮೌಲ್ಯದ ಮದ್ಯ ಹಾಗೂ 6.42 ಲಕ್ಷ ಮೌಲ್ಯದ ಮಾದಕ ದ್ರವ್ಯ, 2.17 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ. ಆದಾಯ ತೆರಿಗೆ ಇಲಾಖೆಯು 14.95 ಕೋಟಿ ನಗದು ಹಾಗೂ 6.51 ಲಕ್ಷ ಮೌಲ್ಯದ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಅಬಕಾರಿ ಇಲಾಖೆಯು 35.94 ಕೋಟಿ ರೂ.ಮೌಲ್ಯದ ಮದ್ಯ, 4.48 ಲಕ್ಷ ರೂ.ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡಿದೆ. 2370 ಗಂಭೀರ ಪ್ರಕರಣಗಳು, ಮದ್ಯದ ಪರವಾನಿಗೆ ಉಲ್ಲಂಘಿಸಿದ 3406 ಪ್ರಕರಣಗಳು, 8 ಎನ್‌ಡಿಪಿಎಸ್ ಹಾಗೂ ಅಬಕಾರಿ ಕಾಯ್ದೆ ಅನ್ವಯ 10308 ಪ್ರಕರಣಗಳನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News