‘ಗಣವೇಷ’ದಲ್ಲಿ ಮತಯಾಚಿಸಿದ ಬೆಂ.ಉತ್ತರ ಲೋಕಸಭಾ ಪಕ್ಷೇತರ ಅಭ್ಯರ್ಥಿ

Update: 2019-04-16 13:05 GMT

ಬೆಂಗಳೂರು, ಎ.16: ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಬೆಂಗಳೂರು ಉತ್ತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಹನುಮೇಗೌಡ ಅವರು ಆರೆಸ್ಸೆಸ್ ಗಣವೇಷದಲ್ಲಿ ಮಲ್ಲೇಶ್ವರಂನ ವಿವಿಧೆಡೆ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಹನುಮೇಗೌಡ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಪ್ರಾಮಾಣಿಕತೆ ಹಾಗೂ ದೇಶ ನಿಷ್ಠೆಯನ್ನು ಕಲಿಸುತ್ತದೆ. ಆರೆಸ್ಸೆಸ್ ಹಿನ್ನೆಲೆಯ ಅನೇಕ ರಾಜಕಾರಣಿಗಳು ಇಂದು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಅಭ್ಯರ್ಥಿಗಳನ್ನು ತಿರಸ್ಕರಿಸುವಂತೆ ಜನರ ಗಮನ ಸೆಳೆಯಲು ನಾನು ಕಣಕ್ಕೆ ಇಳಿದಿದ್ದೇನೆ. ಮಾಹಿತಿ ಹಕ್ಕು ಕಾರ್ಯಕರ್ತನಾಗಿ ಅನೇಕ ಹಗರಣಗಳನ್ನು ಬಯಲಿಗೆ ಎಳೆದಿದ್ದೇನೆ. ಇದೇ ಹಿನ್ನೆಲೆಯಲ್ಲಿ ನಾನು ನನ್ನ ಹೋರಾಟವನ್ನು ಮುಂದುವರೆಸಲಿದ್ದೇನೆ ಎಂದು ಹೇಳಿದರು. ದೇಶಭಕ್ತಿ, ನಿಸ್ವಾರ್ಥ ತ್ಯಾಗ, ಪ್ರಾಮಾಣಿಕತೆಗೆ ಬದ್ಧನಾಗಿದ್ದೇನೆ. ಅಧರ್ಮ, ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಹೀಗಾಗಿ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಬೇಕು ಎಂದು ಎನ್.ಹನುಮೇಗೌಡ ಇದೇ ವೇಳೆ ಕೋರಿದರು.

ಮಲ್ಲೇಶ್ವರಂ ವೃತ್ತದಲ್ಲಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆಗೆ ನಮಸ್ಕರಿಸಿ ತಮ್ಮ ಪ್ರಚಾರವನ್ನು ಪ್ರಾರಂಭಿಸಿದ ಅವರು, ಮಲ್ಲೇಶ್ವರಂ ಪ್ರಮುಖ ಬೀದಿಗಳಲ್ಲಿ ಸ್ವತಂತ್ರ ಹಾಗೂ ಪ್ರಾಮಾಣಿಕ ವ್ಯಕ್ತಿಗೆ ಮತ ನೀಡಿ ಎಂದು ಹನುಮೇಗೌಡ ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News