ನೀತಿ ಸಂಹಿತೆ ಉಲ್ಲಂಘನೆ: 78.84 ಕೋಟಿ ಮೌಲ್ಯದ ನಗದು, ಮದ್ಯ ವಶ

Update: 2019-04-16 18:08 GMT

ಬೆಂಗಳೂರು, ಎ.16: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ಸ್, ಸರ್ವೆಲೆನ್ಸ್ ಸ್ಕ್ವಾಡ್ಸ್, ಅಬಕಾರಿ ಹಾಗೂ ವಾಣಿಜ್ಯ ತೆರಿಗೆ ತಂಡಗಳಿಂದ 78.84 ಕೋಟಿ ಮೌಲ್ಯದ ನಗದು, ಮದ್ಯ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾ ತಂಡಗಳಿಂದ 16.07 ಕೋಟಿ ನಗದು, 63.27 ಲಕ್ಷ ಮೌಲ್ಯದ ಮದ್ಯ, 6.62 ಲಕ್ಷ ಮೌಲ್ಯದ ಮಾದಕ ದ್ರವ್ಯ ಹಾಗೂ 3.71 ಕೋಟಿ ಮೌಲ್ಯದ ಬೆಲೆ ಬಾಳುವ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. 1844 ಎಫ್‌ಐಆರ್ ದಾಖಲಿಸಲಾಗಿದೆ. ತೆರಿಗೆ ಇಲಾಖೆಯು 15.60 ಕೋಟಿ ನಗದು ಹಾಗೂ 6.51 ಮೌಲ್ಯದ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಅಬಕಾರಿ ಇಲಾಖೆಯು 36.22 ಲಕ್ಷ ಮೌಲ್ಯದ ಮದ್ಯ, 4.48 ಲಕ್ಷ ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡು, 2431 ಗಂಭೀರ ಪ್ರಕರಣಗಳನ್ನು ದಾಖಲಿಸಿದೆ. ಮದ್ಯ ಪರವಾನಿಗೆ ಉಲ್ಲಂಘಿಸಿದ 3510, 8 ಎನ್‌ಡಿಪಿಎಸ್ ಹಾಗೂ 10638 ಅಬಕಾರಿ ಕಾಯ್ದೆ ಉಲ್ಲಂಘಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News