ಸಿ-ವಿಜಿಲ್‌ನಲ್ಲಿ ಎರಡು ಸಾವಿರಕ್ಕೂ ಅಧಿಕ ದೂರು ದಾಖಲು

Update: 2019-04-16 18:09 GMT

ಬೆಂಗಳೂರು, ಎ.16: ಪಾರದರ್ಶಕ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಸಿ-ವಿಜಿಲ್ ಅಪ್ಲಿಕೇಷನ್ ಮೂಲಕ 2,522 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ.

ಅದರಡಿ ಅನುಮತಿಯಿಲ್ಲದೆ ಪೋಸ್ಟರ್, ಬ್ಯಾನರ್ ಕುರಿತು 532, ಹಣ ಹಂಚಿಕೆ ಕುರಿತು 206, ಮದ್ಯ ಹಂಚಿಕೆ ಸಂಬಂಧ 122, ಅನುಮತಿ ರಹಿತ ವಾಹನ, ಬೆಂಗಾವಲು ವಾಹನಗಳ ಕುರಿತು 106, ಉಡುಗೊರೆ ಅಥವಾ ಕೂಪನ್ ಹಂಚಿಕೆ ಕುರಿತು 87, ಕಾಸಿಗಾಗಿ ಸುದ್ದಿ ಸಂಬಂಧ 53, ಸಾರ್ವಜನಿಕ ಸ್ವತ್ತುಗಳ ಅಂದಗೆಡಿಸುವಿಕೆ ಬಗ್ಗೆ 48 ದಾಖಲಾಗಿವೆ. ಇದರಲ್ಲಿ 1046 ದೂರುಗಳು ಸತ್ಯ ಎಂದು ದೃಢೀಕರಿಸಲಾಗಿದೆ.

ಮತದಾರರ ಸಹಾಯವಾಣಿ ಮೂಲಕ 87,586 ಕರೆಗಳು ದಾಖಲಿಸಿದ್ದು, 77,871 ಕರೆಗಳು ಮಾಹಿತಿ ಕೋರಲಾಗಿದೆ. 470 ಜನರು ಹಿಮ್ಮಾಹಿತಿ ಕೋರಿದ್ದು, 4,633 ಸಲಹೆಗಳು ನೀಡಲಾಗಿದ್ದು, 4,612 ದೂರುಗಳನ್ನು ದಾಖಲಿಸಲಾಗಿದೆ. ಇ-ಮೇಲ್ ಹಾಗೂ ಪತ್ರಗಳ ಮೂಲಕ 767, ಪತ್ರಿಕೆ ಮತ್ತು ಟಿವಿಗಳಿಂದ 380, ಸಾಮಾಜಿಕ ಜಾಲತಾಣದಿಂದ 345 ದೂರುಗಳು ಸ್ವೀಕರಿಸಿದ್ದು, ಒಟ್ಟು 1,492 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಸುವಿಧಾ ಮೂಲಕ ಅನುಮತಿಗಾಗಿ 8,948 ಅರ್ಜಿಗಳು ಸ್ವೀಕಾರವಾಗಿದ್ದು, 7,892 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ, 651 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಅದರಲ್ಲಿ ಬಿಜೆಪಿ 3,685, ಕಾಂಗ್ರೆಸ್ 2,672, ಜೆಡಿಎಸ್ 1,068, ಬಿಎಸ್ಪಿ 350, ಸಿಪಿಎಂ 68, ಸಿಪಿಐ 36, ಪಕ್ಷೇತರರು 477 ಹಾಗೂ ಇತರರು 551 ಅರ್ಜಿಗಳು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News