ಮಾನವ ಹೃದಯದ ಯಶಸ್ವಿ 3ಡಿ ಮುದ್ರಣ: ವೈದ್ಯಕೀಯ ಕ್ಷೇತ್ರದ ಕ್ರಾಂತಿಕಾರಕ ಸಂಶೋಧನೆ

Update: 2019-04-16 18:37 GMT

ಟೆಲ್ ಅವೀವ್ (ಇಸ್ರೇಲ್), ಎ. 16: ಇಸ್ರೇಲ್‌ನ ಟೆಲ್ ಅವೀವ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರಥಮ ಬಾರಿಗೆ ಮೂರು ಆಯಾಮಗಳ (3ಡಿ) ಮಾನವ ಹೃದಯವನ್ನು ಮುದ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೋಗಿಯೊಬ್ಬರ ಜೈವಿಕ ವಸ್ತುಗಳು ಮತ್ತು ಕೋಶಗಳನ್ನು ಬಳಸಿ ಹೃದಯದ 3ಡಿ ಪ್ರಿಂಟ್ ತೆಗೆಯಲಾಗಿದೆ ಎಂದು ‘ಅಡ್ವಾನ್ಸ್‌ಡ್ ಸಯನ್ಸ್’ನಲ್ಲಿ ಮಂಗಳವಾರ ಪ್ರಕಟಗೊಂಡ ವರದಿಯೊಂದು ತಿಳಿಸಿದೆ.

ಕೋಶಗಳು, ರಕ್ತನಾಳಗಳು, ಒಳಗಿನ ಕುಹರಗಳು ಸೇರಿದಂತೆ ಸಂಪೂರ್ಣ ಹೃದಯವೊಂದನ್ನು ಸೃಷ್ಟಿಸಲಾಗಿದೆ.

ಇದು ಹಿಂದಿನ ಪ್ರಯತ್ನಗಳಿಗಿಂತ ಗಮನಾರ್ಹ ಮಟ್ಟದಲ್ಲಿ ಸುಧಾರಿತವಾಗಿದೆ. ಹಿಂದೆ ಸೃಷ್ಟಿಸಲಾದ ಹೃದಯಗಳಲ್ಲಿ ಅಂಗಾಂಶಗಳಿದ್ದರೂ ರಕ್ತನಾಳಗಳಿರಲಿಲ್ಲ.

ಆದಾಗ್ಯೂ, ಈಗ ಮುದ್ರಿಸಲಾಗಿರುವ ಹೃದಯ ಚಿಕ್ಕದು. ಅದು ಮೊಲದ ಹೃದಯದ ಗಾತ್ರವನ್ನು ಹೊಂದಿದೆ.

ಆದರೆ, ಮುಂದೆ ಇದೇ ತಂತ್ರಜ್ಞಾನ ಅಭಿವೃದ್ಧಿಯಾಗಿ ಮಾನವ ಗಾತ್ರದ ಹೃದಯಗಳ ಸೃಷ್ಟಿ ಸಾಧ್ಯವಿದೆ.

ಇದು ಕ್ರಾಂತಿಕಾರಕ ಸಂಶೋಧನೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಪೀಡಿತ ಮಾನವ ಹೃದಯಗಳನ್ನು ತೆಗೆದು ಈ ಕೃತಕ ಹೃದಯಗಳನ್ನು ಅಳವಡಿಸಬಹುದಾಗಿದೆ.

ಇನ್ನು 10 ವರ್ಷಗಳಲ್ಲಿ ಹೃದಯವನ್ನು ಮುದ್ರಿಸುವ 3ಡಿ ಪ್ರಿಂಟರ್‌ಗಳು ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ ಎಂಬ ಭರವಸೆಯನ್ನು ಟೆಲ್ ಅವೀವ್ ವಿಶ್ವವಿದ್ಯಾನಿಲಯದ ಸಂಶೋಧಕರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News