ದೇಶದ ಭವಿಷ್ಯ ಮತದಾರರ ಮೇಲಿದೆ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ

Update: 2019-04-18 18:34 GMT

ಬೆಂಗಳೂರು, ಎ.18: ಪ್ರಜಾಪ್ರಭುತ್ವದಲ್ಲಿ ಮತದಾನ ಬಹಳ ಮುಖ್ಯ, ಎಲ್ಲರೂ ಮನೆಯಿಂದ ಹೊರಬಂದು ಮತದಾನ ಮಾಡಬೇಕೆಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಮನವಿ ಮಾಡಿದ್ದಾರೆ.

ನಗರದಲ್ಲಿ ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಮತ ಹಾಕಬೇಕು. ದೇಶ ನಿರ್ಮಾಣ ಮತ್ತು ನಮ್ಮ ಭವಿಷ್ಯ ನಾವು ಹಾಕುವ ಮತಗಳನ್ನು ಅವಲಂಬಿಸಿದೆ. ರಾಜಕೀಯ ಅಭಿಪ್ರಾಯಗಳು ಏನೇ ಇರಲಿ. ಬೇರೆ, ಬೇರೆ ಪಕ್ಷಗಳ ಪ್ರಣಾಳಿಕೆಗಳು ಯಾವುದೆ ಇರಲಿ ಅವೆಲ್ಲ ನಗಣ್ಯ. ಮತದಾನವೆ ಮುಖ್ಯವೆಂದು ತಿಳಿಸಿದರು.

ಜೆಪಿ ನಗರದಲ್ಲಿ ನಟ ಸುದೀಪ್ ಮತ ಚಲಾಯಿಸಿ, ಎಲ್ಲರೂ ತಮ್ಮ ಮತವನ್ನು ಚಲಾಯಿಸಿ 10ನಿಮಿಷ ಬಿಡುವು ಮಾಡಿಕೊಂಡು ಬಂದು ನಿಮ್ಮ ಕರ್ತವ್ಯ ನಿರ್ವಹಿಸಿ. ಇದರಿಂದ ಪ್ರಜಾಪ್ರಭುತ್ವ ಬಲಿಷ್ಠಗೊಂಡು ಎಲ್ಲರಿಗೂ ಸಮಾನವಾದ ಹಕ್ಕು, ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.

ನಟಿ ತಾರಾ ಮಾತನಾಡಿ, ನನಗೆ 2014 ಮತ್ತು 2019ರ ಚುನಾವಣೆಯಲ್ಲಿನ ವ್ಯತ್ಯಾಸ ಕಾಣುತ್ತಿದೆ. ಆಗ ಮತಗಟ್ಟಿಗೆ ಬಂದ ತಕ್ಷಣವೇ ಮತಚಲಾಯಿಸಿದ್ದೆ. ಆದರೆ, ಈ ಬಾರಿ ಸರತಿ ಸಾಲಿನಲ್ಲಿ ನಿಂತು ಮತ ಹಾಕುತ್ತಿದ್ದೇನೆ. ಅಷ್ಟರಮಟ್ಟಿಗೆ ಜನತೆ ಮತದಾನದ ಕುರಿತು ಜಾಗೃತಿಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News