ಹೇಮಂತ್ ಕರ್ಕರೆ ಬಗ್ಗೆ ಪ್ರಜ್ಞಾ ಸಿಂಗ್ ಹೇಳಿಕೆಯನ್ನು ಖಂಡಿಸಿದ ಐಪಿಎಸ್ ಅಧಿಕಾರಿಗಳ ಸಂಘಟನೆ

Update: 2019-04-19 13:03 GMT

ಹೊಸದಿಲ್ಲಿ, ಎ. 19:  ಎಟಿಎಸ್ ನ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ  ಸಾವಿಗೆ ತನ್ನ ಶಾಪ ಕಾರಣವೆಂದು ಪ್ರಜ್ಞಾ ಸಿಂಗ್  ನೀಡಿರುವ ಹೇಳಿಕೆಯನ್ನು ಐಪಿಎಸ್  ಅಧಿಕಾರಿಗಳ ಸಂಘಟನೆ  ಖಂಡಿಸಿದೆ.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್  ಠಾಕೂರ್ ಗೆ ಮಧ್ಯಪ್ರದೇಶದ  ಭೋಪಾಲ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದ್ದು, ಚುನಾವಣಾ ಪ್ರಚಾರ ಸಭೆಯಲ್ಲಿ ಹೇಮಂತ್ ಕರ್ಕರೆ ಸತ್ತದ್ದು ನನ್ನ ಶಾಪದಿಂದ  ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

2008 ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಹುತಾತ್ಮರಾಗಿದ್ದರು.

ಹೇಮಂತ್ ಕರ್ಕರೆ ಬಗ್ಗೆ ಪ್ರಜ್ಞಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿಗಳ ಸಂಘಟನೆ “ಅಶೋಕ್ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ್ದರು ಅವರ ಬಗ್ಗೆ  ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್  ನೀಡಿರುವ ಹೇಳಿಕೆಯನ್ನು ಸಮವಸ್ತ್ರದಲ್ಲಿರುವ ನಾವು ಖಂಡಿಸುತ್ತೇವೆ ಮತ್ತು ಹುತಾತ್ಮರಾದ ಎಲ್ಲರ ತ್ಯಾಗವನ್ನು ಗೌರವಿಸಬೇಕೆಂದು ಒತ್ತಾಯಿಸುತ್ತೇವೆ ” ಎಂದು ಐಪಿಎಸ್ ಅಧಿಕಾರಿಗಳ ಸಂಘಟನೆ ಅಭಿಪ್ರಾಯಪಟ್ಟಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News